ಸ್ನೇಹ ಅಂದ್ರೆನೆ ಹಾಗೆ
ಬೆಳೆಯೊ ಮರ ನಾವಾದರೆ ಅದಕ್ಕೆ
ಅಪ್ಪಿಕೊಂಡು ಅಂಕು ಡೊಂಕನ್ನು
ಒಪ್ಪಿಕೊಂಡು ಹರಡೊ ಬಳ್ಳಿ ಇದ್ದಹಾಂಗೆ…
ಸ್ನೇಹ ಅಂದ್ರೆನೆ ಹಾಗೆ
ದಿನ ಓದುವ ಪತ್ರಿಕೆಯೆ ನಾವಾದರೆ, ಅದರ
ಒಳಗೆ ಸದ್ದು ಮಾಡುವ ಮುಖ್ಯ –
ಸುದ್ದಿ ಇದ್ದಹಾಂಗೆ…
ಸ್ನೇಹ ಅಂದ್ರೆನೆ ಹಾಗೆ
ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ನಾವು
ಹೊರಟರೆ, ನಮ್ಮೊಂದಿಗೆ ಜೋತೆಯಲ್ಲಿ
ಬರುವ, ಬಂದು ಆಹ್ಲಾದಕರವಾಗಿ ಬೀಸುವ
ತಂಗಾಳಿ ಇದ್ದಹಾಂಗೆ…
ಸ್ನೇಹ ಅಂದ್ರೆನೆ ಹಾಗೆ
ನಾವು ತಿನ್ನುವ ತಿಂಡಿಯಲ್ಲಿ
ಖಾರಭಾತನೊಂದಿಗೆ ಕೆಸರಿಭಾತನ್ನು, ಇಡ್ಲಿ
ಜೋತೆಯಲ್ಲಿ ಸಾಂಬಾರನ್ನು, ದೋಸೆ-
ಯೊಂದಿಗೆ ಚಟ್ನಿಯನ್ನು ಸೇರಿಸಿ ಸವಿದಂಗೆ…
ಸ್ನೇಹ ಅಂದ್ರೆನೆ ಹಾಗೆ
ಕಣ್ಣಿಗೆ ಕಾಣುವ ಈ ದೇಹ ನಾವಾದರೆ
ಕಂಡರು ಕಾಣದಿದ್ದರು ನಮ್ಮೊಂದಿಗೆ ಇದ್ದೆ-
ಇರುವ ಆ ಜೀವಾತ್ಮ ಇದ್ದಂಗೆ…
ಸ್ನೇಹ ಅಂದ್ರೆನೆ ಹಾಗೆ
ತುಂಬಿ ಹರಿಯೋ ನದಿಯಲ್ಲಿ ದಿಕ್ಕು ಕಾಣದೆ
ನಿಂತಾಗ ತೇಲಿ ಬರೋ ಆ ದೋಣಿ-
ಇದ್ದಹಾಂಗೆ, ಕಾಲ ಕಾಲಕ್ಕೆ ಕರುಣೆಯಿಟ್ಟು
ಕಾಪಾಡುವ ಹೆತ್ತ ತಾಯಿ ಇದ್ದಂಗೆ…
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೦೭-ಅಗಷ್ಟ್-೨೦೨೧