ಕನ್ನಡ ಕಲಿಕೆಯಲ್ಲಿ ಹಾಡು, ನೃತ್ಯ ಹಾಗೂ ಆಂಗಿಕ ಅಭಿನಯದ ಬಳಕೆ…!!

ದೇಶ ವಿದೇಶದಲ್ಲಿ ನೆಲೆಸಿರುವ ಬಹುತೇಕ ಎಲ್ಲಾ ವಯಸ್ಸಿನ ಕನ್ನಡಿಗರಲ್ಲಿ ಈಗ ತಮ್ಮ ಹೊಸ ವಿಧಾನದ ಪ್ರಯೋಗಗಳಿಂದ ಹಾಡು ಅಭಿನಯ, ಕಲೆ, ಸಂಗೀತ, ವರ್ಣಮಾಲೆ, ಕಾಗುಣಿತ ಎಲ್ಲವುಗಳನ್ನು ರಚನಾತ್ಮಕವಾಗಿ ಮತ್ತು ಕಲಾತ್ಮಕವಾಗಿ ಒಗ್ಗೂಡಿಸಿ ಮನೋರಂಜನೆಯ ಜೊತೆಜೊತೆಗೆ ಕನ್ನಡ ಕಲಿಕೆಗೆ ಅನುಕೂಲವಾಗುವಂತಹ ವಿಡಿಯೋಗಳನ್ನು ರೂಪಿಸಿ ಅವುಗಳನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡು ಇಂದು ಎಲ್ಲರಿಗೂ ಚಿರಪರಿಚಿತರಾಗಿ ಮನೆಮಾತಾಗಿರುವ ಭರತನಾಟ್ಯ ಪ್ರವೀಣೆ, ಸುಶ್ರಾವ್ಯ ಕಂಠದೊಂದಿಗೆ ಮನಮೋಹಕ ನಗುವನ್ನು ಸದಾ ಮೊಗದ ಮೇಲೆ ಹೊತ್ತುಬರುವ ಆಂಗಿಕ ಅಭಿನಯದ ಚತುರೆ ಅಪ್ಪಟ ಕನ್ನಡತಿ “ಶ್ರೀಮತಿ ಮಾನಸಿ ಸುಧೀರ್” […]

Continue Reading
ಕನ್ನಡ ಕಲಿ ಶಾಲೆಗಳ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕರೆಯೋಲೆ

ಪ್ರೀತಯ ಮುದ್ದು ಮಕ್ಕಳಿ ವರ್ಷವೆಲ್ಲಾ ಕಷ್ಟಪಟ್ಟಾಯಿತು ಕನ್ನಡ ಕಲಿಯಲು ಇಷ್ಟಪಟ್ಟಾಯಿತು ಸಾಕಷ್ಟು ಸಮಯ ಅದಾಗಲೆ ಕೊಟ್ಟಾಯಿತ ಹಾಗಿದ್ದಮೇಲೆ ಕಲಿಯುವ, ಕಲಿಸುವ ಹಾಗೂ ಕಲಿಕೆಯ ಸಂಭ್ರಮವು ಆಗಬೆಕಲ್ಲವೆ..? ಇಗೋ ಆ ಸಂಭ್ರಮದ ಸಮಯವು ಬಂದಾಯಿತು ಅದರ ಕರೆಯೋಲೆ ನಿಮಗಾಗಿ ಸಿದ್ಧವಾಗಿ ನಿಮ್ಮನ್ನು ತಲುಪಿ ಕಾತುರದಿಂದ ನಿವುಗಳೆಲ್ಲರು ಬರುವುದನ್ನು ಜೋತೆಗೆ ನಿಮ್ಮ ಸ್ನೇಹಿತರನ್ನು ಕರೆತರುವುದನ್ನು ಸ್ವಾಗತಿಸಲು ನಾವು ತುದಿಗಾಲ ಮೇಲೆ ನಿಂತು ಕಾಯುವ ಸರದಿ ಬಂದಾಯಿತು. ನೀವೆಲ್ಲರೂ ಬರುತ್ತೀರಿಯಲ್ಲವೆ? ನೀವೂ ಬನ್ನಿ ನಿಮ್ಮ ಮನೆಯವರನ್ನು ಮತ್ತು ಸ್ನೇಹಿತರನ್ನು ಕರೆತನ್ನಿ. ನಿಮಗಾಗಿ […]

Continue Reading
ಕನ್ನಡ ಕಲಿ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಜೋತೆಗೂಡಿ ನಲಿ-೨

ಆತ್ಮೀಯ ಪೋಷಕರೆ,ಎಲ್ಲರಿಗೂ ಹೃದಯ ಪೂರ್ವಕ ನಮಸ್ಕಾರಗಳು ಹಾಗೂ ಈ ದಿನದ ಶುಭಾಶಯಗಳು…!! ಕಳೆದ ಹಲವಾರು ವರ್ಷಗಳಿಂದ ತಾವೆಲ್ಲರೂ ನಮ್ಮ ಬೆನ್ನಹಿಂದೆ ನಿಂತು ನಮ್ಮ ನಿಮ್ಮೆಲ್ಲರ ಮಾತೃಭಾಷೆ ಯಾದ ಕನ್ನಡವನ್ನು ಮಕ್ಕಳಿಗೆ ಕಲಿಸಲಿಕ್ಕಾಗಿ ಎಡೆ ಬಿಡದೆ ತೊಡಗಿಸಿಕೊಂಡಿರುವ “ಕನ್ನಡಿಗರು ಯುಕೆ” ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಕನ್ನಡ ಕಲಿ” ಯ ಭಾಗವಾಗಿ ಅದರ ಇಂದಿನ ಯಶಸ್ಸಿಗೆ ನೀವು ಸಂಪೂರ್ಣವಾಗಿ ಭಾಜನರಾಗಿದ್ದಿರಿ. ನಿಮ್ಮ ಆಕಾಂಕ್ಷೆ, ಅಭಿಮಾನ,ಕನ್ನಡದ ಮೇಲಿನ ಪ್ರೀತಿ ಮತ್ತು ಅದನ್ನು ನಮ್ಮ ಮಕ್ಕಳಿಗೆ ಕಲಿಸಬೇಕೆಂಬ ಹೆಬ್ಬಯಕೆಯ ಬಲವೆ ನಮ್ಮ […]

Continue Reading

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅನಿವಾಸಿ ಶಿಕ್ಷಕ ಶಿಕ್ಷಕಿಯರಿಗೆ ಕನ್ನಡ ಕಲಿ ಶಿಬಿರ

ಬೇಸಿಗೆ ಕಾಲ ಶಿಬಿರಗಳಿಗೆ ಹೇಳಿ ಮಾಡಿಸಿದಂತಹ ಸಮಯ ಹಾಗೂ ಬಹುತೇಕ ಸಂಯೋಜಕರು ಶಿಬಿರಗಳನ್ನು ಬೇಸಿಗೆಯಲ್ಲಿಯೇ ಎರ್ಪಡಿಸಲು ಇಷ್ಟಪಡುವಂತಹದು ಹಾಗೂ ಬಿರಿಬಿಸಿಲು ಒಂದನ್ನು ಬಿಟ್ಟರೆ ಹೆಚ್ಚೇನೂ ಹವಾಮಾನ ವೈಪರಿತ್ಯಗಳನ್ನು ಎದಿರು ನೋಡದ ಸಮಯ.  ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನರು ಕರೋನಾ ಮತ್ತು ಅದರ ನಿರ್ಭಂಧಗಳ ಬವಣೆಯಿಂದ ತತ್ತರಿಸಿ ಅದರಿಂದ ಹೊರಬಂದು ಅತ್ಯಂತ ಕುತೂಹಲದಿಂದ ಈ ಬಾರಿಯ ಬೇಸಿಗೆಯನ್ನು ಎದಿರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ  ಸಿಂಗಾಪುರ್, ಯುಕೆ, ಯುರೊಪ್, ಘಲ್ಫ್ ಹಾಗೂ ಅಮೇರಿಕಾದ ಕೆಲವು ಪ್ರದೇಶಗಳಲ್ಲಿ ಕನ್ನಡವನ್ನು ಕಲಿಸುತ್ತಿರುವ ಅನಿವಾಸಿ ಕನ್ನಡ […]

Continue Reading

“ಕನ್ನಡ ಕಲಿ” ಜೋತೆ ಗೂಡಿ ನಲಿ

ಆತ್ಮೀಯ ಶಿಕ್ಷಕ ಶಿಕ್ಷಕಿಯರೆ, ಎಲ್ಲರಿಗೂ ಹೃದಯ ಪೂರ್ವಕ ನಮಸ್ಕಾರಗಳು ಹಾಗೂ ಈ ದಿನದ ಶುಭಾಶಯಗಳು…!! ಕಳೆದ ಒಂದು ವರ್ಷದಿಂದ ತಾವೆಲ್ಲರೂ ಎಲೆ ಮರೆಯ ಕಾಯಿಯಂತೆ ನಮ್ಮ ಹಿಂದೆ ನಿಂತು ತಮ್ಮನ್ನು ತಾವು ಎಡೆ ಬಿಡದೆ ತೊಡಗಿಸಿಕೊಂಡು “ಕನ್ನಡಿಗರು ಯುಕೆ” ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಕನ್ನಡ ಕಲಿ” ಯ ಭಾಗವಾಗಿ ಅದರ ಇಂದಿನ ಯಶಸ್ಸಿಗೆ ನೀವು ಸಂಪೂರ್ಣವಾಗಿ ಭಾಜನರಾಗಿದ್ದಿರಿ. ನಿಮ್ಮ ಸೇವಾ ಮನೋಭಾವ,ಕನ್ನಡದ ಮೇಲಿನ ಪ್ರೀತಿ ಮತ್ತು ಅದನ್ನು ಮಕ್ಕಳಿಗೆ ಕಲಿಸಬೇಕೆಂಬ ಹೆಬ್ಬಯಕೆಯ ಬಲವೆ ನಮ್ಮ “ಕನ್ನಡ […]

Continue Reading

ಕನ್ನಡ ಶಾಲೆಗಳ ವಾರ್ಷಿಕೋತ್ಸವ- ಜೂಲೈ ೧೮ ೨೦೨೧

ಕನ್ನಡಿಗರು ಯುಕೆ ಕನ್ನಡ ಕಲಿಯ ಸಹವರ್ತಿಗಳೇ, ನಿಮಗೊಂದು ಒಳ್ಳೆಯ ಸುದ್ದಿ !! ಇದೇ ಬರುವ ಜೂಲೈ ೧೮ ೨೦೨೧ ರಂದು ಕನ್ನಡ ಶಾಲೆಗಳ ವಾರ್ಷಿಕೋತ್ಸವ ನಡೆಯಲಿದ್ದು ಈ ಉತ್ಸವವು ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಳ್ಳಲಿದೆ. ಮುಖ್ಯ ಅಥಿತಿಗಳಾಗಿ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ. ಟಿ.ಎಸ್. ನಾಗಾಭರಣ, ಕಾರ್ಯದರ್ಶಿಗಳಾದ ಡಾ.ಗವಿ ಸಿದ್ಧ್ಯಯ್ಯ ಹಾಗು ಕನ್ನಡ ಅಕಾಡೆಮಿ ಯ ಅಧ್ಯಕ್ಷರಾದ ಶ್ರೀ ಶಿವ ಗೌಡರ್ ಮತ್ತು ತಂಡದವರು ಉಪಸ್ಥಿತರಾಗಲಿದ್ದಾರೆ. ಕನ್ನಡಿಗರು ಯುಕೆ ಕನ್ನಡ ಕಲಿಯ ಎಲ್ಲ ಶಿಕ್ಷಕ, […]

Continue Reading

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅನಿವಾಸಿ ಶಿಕ್ಷಕ ಶಿಕ್ಷಕಿಯರಿಗೆ ಕನ್ನಡ ಕಲಿ ಶಿಬಿರ

ಕರ್ನಾಟಕ ರಾಜ್ಯ ಸರ್ಕಾರ -ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಪ್ರತ್ಯೇಕವಾಗಿ ಯು.ಕೇ, ಯುರೋಪ್, ಗಲ್ಫ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಕನ್ನಡ ಪರ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಶಿಕ್ಷಕ ಶಿಕ್ಷಕಿಯರಿಗೆ ಕನ್ನಡ ಕಲಿ ಶಿಬಿರವನ್ನು ಇದೆ ಜೂನ್ ೧೨ ನೇ ತಾರೀಖಿನಂದು ನಡೆಸಲಿದೆ. ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ಮತ್ತು ಕಾರ್ಯದರ್ಶಿಗಳಾದ ಶ್ರೀ ಡಾ. ಗವಿ ಸಿಧ್ದಯ್ಯ ರವರ ಉಪಸ್ಥಿತಿಯಲ್ಲಿ, ಖ್ಯಾತ ಬರಹಗಾರರಾದ ನಲಿಕಲಿ ರವೀಂದ್ರ ರವರು ಈ ಶಿಬಿರವನ್ನು ಆನ್ಲೈನ್ ತಾಣದ ಮೂಲಕ ನಡೆಸಿಲಿದ್ದಾರೆ. […]

Continue Reading