ಕನ್ನಡ…!!

ಉದಯಿಸುವ ರವಿಯಂತೆನಮ್ಮಯ ಈ ನುಡಿ ಕನ್ನಡ…ತಂಪೆರೆದು ಬೆಳದಿಂಗಳ ಚಲ್ಲುವಚಂದಿರನಂತೆ ಈ ಸವಿಗನ್ನಡ… ಸುರಿಯುವ ಮಳೆಯಂತೆಈ ಸಿರಿಗನ್ನಡ…ಹರಿಯುವ ಹೊಳೆಯಂತೆನಮ್ಮಯ ಈ ನುಡಿ ಕನ್ನಡ… ಆಗಸದ ವಿಶಾಲತೆಯಂತೆನಮ್ಮಯ ಈ ಸಿರಿಗನ್ನಡ…ಬೊರ್ಗೆರೆಯುವ ಕಡಲಿನಮೊರೆತಕ ಸಮವಿದು ಸವಿಗನ್ನಡ… ಹೆಳುತ್ತಿದ್ದಾರೆ ಕನ್ನಡ ಕಳೆದುಹೋಗುವುದಂತೆ,ಕೆಳಿದರೆ ಅನುಸುತ್ತದೆ ಅಲ್ಲಿನಡಿಯುತ್ತಿರಬಹುದೆ ಹುಚ್ಚರ ಸಂತೆ ನಾವು ಕನ್ನಡ ಉಳಿಸುವುದಂತೆಬೆಳಿಸುವುದಂತೆ, ಎಲ್ಲವೂಹಸಿ ಸುಳ್ಳಿನ ಕಂತೆ…ಕನ್ನಡವೋ ದಿನ ಬೆಳಗುವ ಆಸೂರ್ಯನಿದ್ದಂತೆ… -ಗೋವರ್ಧನ್ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್೦೫-ನವಂಬರ್-೨೦೨೨

Continue Reading

ಓ ನಲ್ಲೆ…!!

ಓ ನಲ್ಲೆ –ಸಮರಸದ ಜೀವನಕ್ಕೆಲ್ಲಿದೆ ಎಲ್ಲೆಭಾವೈಕ್ಯತೆಯಲ್ಲಿ ನಾವಿಬ್ಬರು ಒಂದಾದಮೇಲೆ…||ಪ|| ಸಂಸಾರವೆಂಬ ಸಂಗೀತದಲ್ಲೆಸೋಲು ಗೆಲವುಗಳೆಂಬುದು ಸ್ವರಗಳಲ್ಲೇ…ಸೋಲನ್ನು ಗೆಲುವಾಗಿಸಬಲ್ಲ ಸ್ವರ-ಸಂಯೋಜಕಿ ನೀನಾದ ಮೇಲೆ, ಪ್ರತಿ ದಿನವುಹೊಸದೊಂದು ಭಾವಗೀತೆಯಲ್ಲೇ…||೧|| ದೊಡ್ಡವರು ಭೋದನೆ ಚಿಕ್ಕವರ-ರೋಧನೆ ಮಧ್ಯ ಮಧ್ಯದಲ್ಲಿ ಬಂದುಹೋಗುವ ‘ಬಿ ಜಿ ಎಮ್’ ಗಳಲ್ಲವೆನೇ…?ಬಂಧು ಮಿತ್ರರ ಆಲಾಪ, ಅಕ್ಕಪಕ್ಕದವರಪ್ರಲಾಪ ಅವುಗಳಿಲ್ಲದೆ ‘ಸಂಸಾರ’ ಸಂಗೀತ-ವಾಗಬಲ್ಲದೆನೇ?…||೨|| ತಾಳ ತಂಬೂರಿ ನಾ ಒಪ್ಪಿ ಹಾಡಲುಕುಳಿತಿರುವೆನು ಹೇ ಮದನಾರಿ…ಜೀವನವೆಂಬ ಈ ಸಂಗೀತ ಕಛೇರಿಯಶಸ್ವಿಯಾಗಿಸಲು ಒಟ್ಟಾಗಿ ನುಡಿಸಿನಡಿಸುವುದೊಂದೆ ನಮಗಿರುವ ದಾರಿ…||೩|| -ಗೋವರ್ಧನ್ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್೨೬-ಜನೇವರಿ-೨೦೨೨

Continue Reading

ಕನ್ನಡ ಅಂದ್ರೆ ನಂಗೆ…

ಕಣ್ಣಲ್ಲಿ ಕಣ್ಣಿಟ್ಟು ಕಾಯೋ…ಕಣ್ಣ ಮುಚ್ಚಿದರೆ ಸಾಕು ಕನಸಲ್ಲಿ ಹಾಯೋ…ಕಣ್ತಪ್ಪಿ ಬೀಳಲು ಅಂದಳವಳು ಅಯ್ಯೊ…ಕೈ ಹಿಡಿದು ಎದ್ದೆಳಿಸಿದ ಭಾರತಾಂಬೆಯ-ಮಗಳು ಕಣಯ್ಯೋ… ಹಿಂದಿ ಉರ್ದು ತೆಲುಗು ಮರಾಠಿಕಲ್ಯಾಣ ಕರ್ನಾಟಕದ ಹೂದೋಟದಲ್ಲಿನನ್ನ ಅಕ್ಕ ಪಕ್ಕದ ಮನೆಯಂಗಳದಲ್ಲಿಒಂದಾಗಿ ಇಂದಿಗೂ ಅರಳುವ ಹೂವುಗಳು…ತುಳು ತಮಿಳು ಮಲಿಯಾಳಿ, ಜೊತೆಗೂಡಿ-ನಾ ಆಡಿ ಒಡನಾಡಿ ನಲಿದು ಒಲಿದ ಮನಂಗಳು… ಕನ್ನಡಿಗರೂ, ಕನ್ನಡ ನುಡಿ, ಅಂದ್ರೆನೆ ಹಂಗೆ…ಬೆಲ್ಲಕ್ಕೆ ಮುತ್ತಿಕ್ಕುವ ಇರುವೆಯ ಹಂಗೆಶಿಸ್ತಿನ ಸಿಪಾಯಿಗಳ ಸಾಲುಗಳು ಇದ್ದಂಗೆ…ಕಣ್ಣಿಗೆ ಬೀಳಲು ಮೂಗನೂ ಕರೆದುಮಾತಾಡುವ ಹಂಗೆ, ಕಿವಿಗೆ ಬೀಳಲೂ…ಕಾಲಿಲ್ಲದ ಕುಂಟ ನೂ ಎದ್ದು ಕುಣಿದುನಲಿದಾಡುವಂಗೆ… […]

Continue Reading

ಪುನೀತ್…??

ಅಪ್ಪ ಅಮ್ಮನಿಗೆ ನಿನ್ನನೋಡುವ ಆಸೆ ಉಂಟಾಯಿತೋ…??ಇಲ್ಲಿ ನಿನಗೆ ಅವರನ್ನುನೋಡುವ ಹಂಬಲವೆ ಬಂದಿತೋ…?? ಧ್ರುವತಾರೆಯಂತೆ ಹೊಳೆಯತ್ತಲಿದ್ದೆಆದರೆ ಮಿಂಚಿನಂತೆ ಮರೆಯಾಗಿ ಹೋದೆ…ಒಟ್ಟಿನಲ್ಲಿ ಕಣ್ಣೀರ ಕಟ್ಟೆಯೊಡೆದಿದೆನೀನು ಯಾರಿಗೂ ಕಾರಣ ಹೇಳಿ ಹೋಗದೆ… ವಿಧಿಯು ತನ್ನ ಅಟ್ಟಹಾಸದಿಂದಸಾವಿರಾರು ಹೃದಯಗಳನ್ನು ಒಡೆದಿದೆ…ನಿನ್ನ ಅಭಿಮಾನಿ ಬಳಗವಿಂದುನೋವಿನಲ್ಲಿ ನರಳಿದೆ… ನಿನ್ನ ಹೃದಯ ಕೆಲಸವನ್ನೆ ಮಾಡದೆನಿಂತ ಸುದ್ದಿಯಾಗಿದೆ…ಅದು ಸತ್ಯವೆಂದು ನಂಬಲುಈ ಅಭಿಮಾನಿ ಹೃದಯ ನಿರಾಕರಿಸಿದೆ… ಕಾಲನ ಕರೆಯು ಸುಳಿವನ್ನು ನೀಡದೆಮೋಸದಿ ಬಲೆಯ ಬೀಸಿ ನಿಂತ ಹಾಗಿದೆ…ಹೃದಯವಂತನೆ ನೀನು ಇನ್ನಾರಿಗೊಸಹಾಯ ಮಾಡಲು ಹೊರಟು‌ ನಿಂತಂತಿದೆ… ಸಪ್ತಸಾಗರ ದ ಆಚೆಯಿಂದಲುಅಕ್ಷರಗಳಲ್ಲಿ ಅಸಮಾಧಾನ […]

Continue Reading

ಚುಕು-ಬುಕು – ೩

೧.ರಾಜಕೀಯದ ಆಗಸದಲ್ಲಿ ಹಕ್ಕಿಯಂತೆಹಾರಾಡುವ ಆಸೆ ಇದಯೆ…?ಹಾಗಿದ್ದರೆ ಬಲೆ ಬೀಸಿ ಕುಳಿತುಕೊಳ್ಳುವಬೇಟೆಗಾರರ ಕೈಯಿಂದತಪ್ಪಿಸಿಕೊಳ್ಳಲು ಅರಿಯುವುದು ಒಂದುಬಹುಮುಖ್ಯ ಕಲೆಯೆ…!! ೨.ಅಂದು ಅಪ್ಪ ಕೊಡುತ್ತಿದ್ದಆಶ್ವಾಸನೆ…ಗರಿಬ್ ಕಲ್ಯಾಣ ಯೋಜನೆಯಹಾಗೆ ಕಾಣುತ್ತಿತ್ತು…ಇಂದು ಅಪ್ಪನಾಗಿ ಕೊಡುತ್ತಿರುವಆಶ್ವಾಸನೆ ಕಾಂಗ್ರೆಸ್…ಬಡತನ ಓಡಿಸಲು ಮಾಡಿದಉಪಾಯದಂತೆ ಭಾಸವಾಯಿತು… ೩.ನಂಬಿಕೆ ಎಂದರೆ ಏನೂ ? ಎಂದುಕೇಳುವ ಕಾಲ ಬರುತ್ತಿದೆ…!!ಏಕೆಂದರೆ ಎಲ್ಲದರಲ್ಲೂ (ಮನೆ ಮನೆಯಲ್ಲೂಮನೆ ಮನದಲ್ಲು) ರಾಜಕೀಯ ಮೂಗುತೂರೀಸುತ್ತಿದೆ…ನಾಯಕರಕೈಯ್ಯೂ ಅದಕ್ಕಿಂತ ಹೆಚ್ಚು ತುರಿಸುತ್ತಿದೆ…!! ೪.ಸುಮ್ಮನೆ ಕೇಳಿಸಿಕೊಂಡೆನನ್ನದೇನೂ ತಪ್ಪಿಲ್ಲ ಎಂದು ತಪ್ಪಿಸಿಕೊಳ್ಳಲುನೋಡುತ್ತಿರುವ ಒಬ್ಬ “ಮಹಾನುಭಾವ”…!!ತಪ್ಪು ಮಾಡಿದ್ದನ್ನು ಆಡಿ ಕಿವಿಯಲ್ಲಿಕೊಂಡಾಡಿ ಈ “ಸಲೀ” ಮಾ (ಡಿ ಆ)ಯಿತುಅವರನ್ನು […]

Continue Reading

ಚುಕು-ಬುಕು – ೨

೧.ದೇವರು ತಾನುಸ್ವತಂತ್ರದಿಂದ ಸ್ವಚ್ಛಂದವಾಗಿರಲುಈ ಪ್ರಪಂಚವನ್ನು ಸೃಷ್ಟಿಸಿದ…!!ಆದರೆ ಮಾನವಅವನಿಗೆ ಗುಡಿಯೊಂದನ್ನು ಕಟ್ಟಿಅದರೊಳಗಿಟ್ಟು ಬಂಧಿಸಲೆತ್ನಿಸಿದ…!! ೨.ಭಗವಂತ ಇದ್ದಾನೆ ಆದರುನಾನೆಂದು ಪ್ರತ್ಯಕ್ಷವಾಗಿ ಕಂಡಿಲ್ಲ…ಮನುಷ್ಯರನ್ನು ಕಂಡಿದ್ದೆನೆ ಆದರೆಭಗವಂತನಾಗಲು ಹೋಗಿಬಡಿಸಿಕೊಳ್ಳುವ ಕೆಲಸ ಅವರಿನ್ನೂಬಿಟ್ಟಿಲ್ಲಾ…!! ೩.ತನ್ನ ಕೈಯಲ್ಲಿ ಏನೂ ಇಲ್ಲಆದರು ತನ್ನಿಂದಲೆ ಎಂದು ಪ್ರದರ್ಶಿಸು-ವುದನ್ನು ಇವರು ಬಿಡುವುದಿಲ್ಲ…ಎಲ್ಲವು ತನ್ನ ಕೈಯಲ್ಲಿದ್ದರುಆ ದೇವರು ಎಂದು ಇವರು ಮುಂದೆಪ್ರತ್ಯಕ್ಷನಾಗುವುದಿಲ್ಲ…!! ೪.ಬಯಸದೆ ಬರುವುದುಎಂದರೆ ಅದು ಸಾವು…ಬಂದರೆಅದು ಓಡಿ ಹೋಗುವಂತೆಬಾಳಿ ತೋರಿಸಬೇಕು ನಾವು…!! ೫.ಬದುಕು ಸಿಕ್ಕರಷ್ಟೆ ಸಾಲದುಅದನ್ನು ಅನುಭವಿಸಿ ದಕ್ಕಿಸಿಕೊಳ್ಳಬೇಕು…ಪ್ರೀತಿ ಹುಟ್ಟಿದರಷ್ಟೆ ಸಾಲದುಪರಾಮರ್ಶಿಸಿ ಪುರಸ್ಕರಿಸುವುದನ್ನುಕಲಿಯಬೇಕು.‌‌..!! ೬.ಗಾಂಧಿಜೀಯವರಲ್ಲಿ ನಮಗೆಕಾಣಿಸುವುದುದಾರಿ ಮತ್ತು ಮಾದರಿಯಾದರೆ…ಶಾಸ್ತ್ರಿಜೀಯವರಲ್ಲಿ ನಮಗೆಕಾಣಸಿಗುವುದುರಹದಾರಿ […]

Continue Reading

ಹುಟ್ಟು ಹಬ್ಬ ಆಚರಿಸಿಕೊಂಡ ಇಡ್ಲಿ

ಇತ್ತೀಚೆಗೆ ಕೆಲವು ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ್ಡಿದ್ದರ ಕಾರಣದಿಂದಾಗಿಯೆ ಎನೋ ಮಗಳು ಸದಾ “ಹ್ಯಾಪಿ ಬರ್ತಡೇ ಟು ಯು” ಹಾಡನ್ನು ಬಿಟ್ಟು ಬಿಡದೆ ಗುಣಗುತ್ತಿದ್ದಾಳೆ. ಬೆಳಿಗ್ಗೆ ಎದ್ದರು, ಬಚ್ಚಲು ಮನೆಯಲ್ಲಿದ್ದರು, ಉಟಮಾಡುವಾಗಲು, ಶಾಲೆಗೆ ಹೋಗುವಾಗ ಮತ್ತು ಬರುವಾಗಲು ಅತ್ಯೆಂತ ಉತ್ಸಾಹದಿಂದ ಹಾಡಿಕೊಂಡು ಎದುರಿಗೆ ಬಂದವರು ಗೊತ್ತಿದ್ದರೆ ಅವರು ಹೆಸರನ್ನು ಹೇಳಿ ಅವರ ಹುಟ್ಟು ಹಬ್ಬವನ್ನು ಇಲ್ಲದ್ದಿದ್ದರು ಆಚರಿಸುತ್ತಿದ್ದಾಳೆ. ಸ್ವಾರಸ್ಯಕರ ಸಂಗತಿ ಎಂದರೆ ಅವಳು ಲಯಬದ್ಧವಾಗಿ ಹಾಡುವುದು, ಹಾಡುವಾಗ ವ್ಯಕ್ತಪಡಿಸುವ ಹಾವ ಭಾವ ನೋಡುವುದೆ ಒಂದು ಛಂದ. ವಿಡಿಯೋ […]

Continue Reading

“ವಾಯು ವಿಹಾರ”

ಆಯ ವ್ಯೇಯಗಳ ಬಗ್ಗೆಚಿಂತಿಸುತ್ತ ಜೀವನದ ಆಯಾಮವನ್ನೆಮರೆತು ಮುನ್ನಡೆಯುತ್ತಿದ್ದೆ… ನಿಯಮಗಳನ್ನೂ ಮೀರಿನಿರ್ಬಂಧಗಳನ್ನು ಗಾಳಿಗೆ ತೂರಿನಿರವತೆಯಡೆಗೆ ಸಣ್ಣಗೆ ನಡೆದುಮುನ್ನುಗುತ್ತಿದ್ದೆ… ಅಂತರಾತ್ಮ ಚೀರಿ ಹೆಳಿತುಯಾಕೋ ಈ ನಿನ್ನ ಅಪೇಕ್ಷೆಯ ಬೊಜ್ಜುತುಸು ಹೆಚ್ಚಾಗಿಯೆ ಹೋಯಿತುಕರಗಿಸಲಸಾಧ್ಯವೆ ಎಂದು ಒಮ್ಮೆ ಕೇಳಿತು…? ಉಸಿರು ತಾರಕಕ್ಕೆರಿತು, ಮನಸ್ಸುಹಿನ್ನೋಟದಲ್ಲಿ ಇಳಿದು ಈಜಾಡ ಹತ್ತಿತು…ಸ್ನೇಹ ಸಂಬಂಧಗಳೆಲ್ಲ ಕಣ್ಣಮುಂದೆತೇಲಿ ಬರಲಾರಂಭಿಸಿತು… ಆಗಸದಲ್ಲಿ ಕಾರ್ಮೋಡಗಳಕತ್ತಲೆ ಆವರಿಸ ಹತ್ತಿತು…ಕಾಲುಗಳು ಮನೆಕಡೆಯತ್ತ ಹೊರಳಿನಡಿಗೆ ಜೋರಾಯಿತು… ಕಣ್ಣೀರ ಹನಿಗಳು ಜೊತೆಯಲ್ಲಿ ಸೇರಿಧರೆಗೆ ಉರುಳಲಾರಂಭಿಸಿತು…ಮಳೆಹನಿಗಳು ಮೋಡಗಳಿಂದ ಚದುರಿಇಳೆಯನ್ನು ಸೇರಿ ಸಂತೈಯಿಸಿದಂತೆ ಭಾಸವಾಯಿತು… -ಗೋವರ್ಧನ ಗಿರಿ ಜೋಷಿಲಂಡನ್, ಯುನೈಟೆಡ್ಸೆಪ್ಟಂಬರ್ ೧೯, […]

Continue Reading

ಯುನೈಟೆಡ್ ಕಿಂಗ್ಡಮ್ ‌ನಲ್ಲಿ ಕಲಿಯುಗದ ಕಾಮಧೇನು…!

ಬಹುತೇಕ ಆಸ್ತಿಕರೆಲ್ಲರು ಒಂದಲ್ಲ ಒಂದು ಬಾರಿಯಾದರು ಕೆಳಿರಬಹುದಾದಂತ ಸಹಜವಾದ ಮಾತು “ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯದ ರಾಘಪ್ಪ” ಅನ್ನುವಷ್ಟರಮಟ್ಟಿಗೆ ಮಂತ್ರಾಲಯದ ಗುರುಸಾರ್ವಬಹುಮರು ದೇಶವಿದೆಶಗಳಲ್ಲಿ ವಾಸಿಸುವ ಬಹುತೇಕ ಆಸ್ತಿಕರಿಗೆ ಚಿರಪರಿಚಿತ. ಎಷ್ಟೊ ಜನ ನಾಸ್ತಿಕರು ಗುರುಗಳ ಆಕಸ್ಮಿಕ ವೃಂದಾವನ ದರ್ಶನ ಮಾತ್ರದಿಂದಲೆ ಅವರ ಕ್ಲೇಶಗಳೆಲ್ಲವು ಕಳೆದುಹೋಗಿ ಅವರ ಪರಮ ಭಕ್ತರಾಗಿದ್ದುಂಟು.ಹೆಳುತ್ತ ಹೋದರೆ ಅವರ ಮಹಿಮೆ, ಪವಾಡಗಳು ಅಪರಂಪಾರ. ಕಲಿಯುಗದ ಕಾಮಧೇನು ಎಂದೆ ಪ್ರಖ್ಯಾತವಾದ ಮಂತ್ರಾಲಯದ ಪ್ರಭುಗಳು ಅವರು ಭಕ್ತರ ಆಶೋತ್ತರಗಳನ್ನು ಈಡೇರಿಸಲು ಯುನೈಟೆಡ್ ಕಿಂಗ್ಡಮ್‌ನಲ್ಲಿಯೂ ಕೂಡ ಬಂದು […]

Continue Reading

ಮಾಯದಂತ ಮಳೆ ಬಂತಣ್ಣ ಮದಗಾನ ಕೆರೆಗೆ…!!

ಈಗ ಭಾರತದಲ್ಲಿ ಮಳೆಗಾಲದ ಸಮಯವಾದರೆ ಇಲ್ಲಿ ಇಂಗ್ಲೆಂಡಿನಲ್ಲಿ ಬೆಸಿಗೆ ಕಾಲ. ಮಳೆಯ ಬರುವಿಕೆಯಿಂದ ಆಹ್ಲಾದಕರವೆಷ್ಟೊ ಅದಕ್ಕಿಂತ ಹೆಚ್ಚು ಅದರಿಂದಾಗುವ ಅವಾಂತರಗಳು ಯಾವಾಗಲು ಜನಸಾಮಾನ್ಯರನ್ನು ಹೈರಾಣ ಮಾಡುವುದೆ ಹೆಚ್ಚು. ಚಿಕ್ಕವನಿದ್ದಾಗ ಹುಟ್ಟಿಬೆಳೆದ ಊರಾದ ದೇವದುರ್ಗ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದುದ್ದರಿಂದ ( ಈಗಲೂ ಅದು ಆ ಸ್ಥಾನವನ್ನು ಕಾಯ್ದಿರಿಸಿಕೊಂಡಿರಬಹುದು ಎಂದು ನನ್ನ ಭಾವನೆ) ಋತುಮಾನ ಯಾವುದಾದರು ಸರಿ ಅಲ್ಲಿ ಸಾಮಾನ್ಯ ಜನರಾದ ನಮ್ಮಂತವರಿಗೆ ಅಡಚಣೆಗಳು ತೊಂದರೆಗಳು ಸರ್ವೆ ಸಾಮಾನ್ಯ. ಬೆಸಿಗೆಯಾದರೆ ನದಿ ಬಾವಿ ಕೆರೆಯಲ್ಲಿ ನಿರಿಲ್ಲದ ಸಮಸ್ಯೆ ಒಂದಡೆಯಾದರೆ […]

Continue Reading