ಯುನೈಟೆಡ್ ಕಿಂಗ್ಡಮ್ ‌ನಲ್ಲಿ ಕಲಿಯುಗದ ಕಾಮಧೇನು…!

ಮನದ ಮಾತು

ಬಹುತೇಕ ಆಸ್ತಿಕರೆಲ್ಲರು ಒಂದಲ್ಲ ಒಂದು ಬಾರಿಯಾದರು ಕೆಳಿರಬಹುದಾದಂತ ಸಹಜವಾದ ಮಾತು “ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯದ ರಾಘಪ್ಪ” ಅನ್ನುವಷ್ಟರಮಟ್ಟಿಗೆ ಮಂತ್ರಾಲಯದ ಗುರುಸಾರ್ವಬಹುಮರು ದೇಶವಿದೆಶಗಳಲ್ಲಿ ವಾಸಿಸುವ ಬಹುತೇಕ ಆಸ್ತಿಕರಿಗೆ ಚಿರಪರಿಚಿತ. ಎಷ್ಟೊ ಜನ ನಾಸ್ತಿಕರು ಗುರುಗಳ ಆಕಸ್ಮಿಕ ವೃಂದಾವನ ದರ್ಶನ ಮಾತ್ರದಿಂದಲೆ ಅವರ ಕ್ಲೇಶಗಳೆಲ್ಲವು ಕಳೆದುಹೋಗಿ ಅವರ ಪರಮ ಭಕ್ತರಾಗಿದ್ದುಂಟು.ಹೆಳುತ್ತ ಹೋದರೆ ಅವರ ಮಹಿಮೆ, ಪವಾಡಗಳು ಅಪರಂಪಾರ. ಕಲಿಯುಗದ ಕಾಮಧೇನು ಎಂದೆ ಪ್ರಖ್ಯಾತವಾದ ಮಂತ್ರಾಲಯದ ಪ್ರಭುಗಳು ಅವರು ಭಕ್ತರ ಆಶೋತ್ತರಗಳನ್ನು ಈಡೇರಿಸಲು ಯುನೈಟೆಡ್ ಕಿಂಗ್ಡಮ್‌ನಲ್ಲಿಯೂ ಕೂಡ ಬಂದು ನೆಲೆಯೂರಿರುವುದನ್ನು ನೋಡಿದರೆ
“ಎಲ್ಲಿ ನಿನ್ನ ಭಕ್ತರೊ ಅಲ್ಲೆ ಮಂತ್ರಾಲಯ, ಎಲ್ಲಿ ನಿನ್ನ ನೆನೆವರೊ ಅಲ್ಲೆ ದೇವಾಲಯ” ಎಂದು ಹಾಡಿ ಕೊಂಡಾಡಿದಂತೆ ಸರಳವಾಗಿ ಒದಗಿ ಬರುವಂತವರು ಅನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದೆನಿಸುತ್ತದೆ.

ಅಮೆರಿಕಾ, ಕೆನಡಾ, ಸಿಂಗಾಪೂರ್ ನಲ್ಲಿ ರಾಯರ ಮಠಗಳಿವೆ ಎಂದು ಕೆಳಿದ್ದೆ ಹಾಗಾಗಿ ೨೦೧೩ರಲ್ಲಿ ಲಂಡನ್‌ಗೆ ಬಂದಾಗ ಇಲ್ಲಿಯು ಇರಬಹುದೆ ಎಂದು ಹುಡುಕಿದಾಗ ಅಷ್ಟೊಂದು ಮಾಹಿತಿ ದೊರೆಯದೆ ನಿರಾಶನಾಗಿದ್ದೆ. ಅದೃಷ್ಟವಶಾತ್ ೨೦೧೭ರಲ್ಲಿ ಸಂಸಾರ ಸಮೇತನಾಗಿ ಮತ್ತೆ ಲಂಡನ್‌ಗೆ ‌ಬಂದಾಗ ಕಣ್ಣಿಗೆ ಬಿದ್ದದ್ದು “ಜಿ ಬಿ ಎಸ್‌ ಆರ್‌ ಎಸ್ ಬೃಂದಾವನ”.

ನಮ್ಮದು ಮೂಲತಹಃ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶಿಷ್ಯ ಪರಂಪರೆಯಾಗಿರುವುದರಿಂದ ಹಾಗೂ ರಾಯಚೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದುದ್ದರಿಂದ ನಾನು ಚಿಕ್ಕವನಿದ್ದಾಗಿಂದಲು ನಮ್ಮ ಮನೆತನಕ್ಕೂ ಮತ್ತು ಮಂತ್ರಾಲಯಕ್ಕು ಒಂದು ರೀತಿಯ ಗುರು ಶಿಷ್ಯಂದಿರ, ತಂದೆ ಮಕ್ಕಳ ಸಂಬಂಧ.ಕಷ್ಟ ಕಾರ್ಪಣ್ಯಗಳು ಬಂದಾಗ ಅತಿ ಹತ್ತಿರದಲ್ಲಿ ಇರುವ ಮತ್ತು ದೃಢವಾಗಿ ನಂಬಿರುವ ಅಸದೃಶ ಶಕ್ತಿ ನಮ್ಮ ಗುರುಸಾರ್ವಭೌಮರು.ಅದೆಲ್ಲದಕ್ಕೂ ಹೆಚ್ಚಾಗಿ ವೈದೀಕ ವೃತ್ತಿಯಲ್ಲಿರುವ ನಮ್ಮ ಕುಟುಂಬದ ಹಲವರಿಗೆ ಜೀವನಕ್ಕೆ ದಾರಿಮಾಡಿ ಕೊಟ್ಟವರು ಎಂದು ನನ್ನ ಭಾವನೆ. ಹಿಂದೊಮ್ಮೆ ಯೌವ್ವನ ಸಹಜ ತಪ್ಪುಗಳಿಂದ ದಾರಿ ಕಾಣದೆ ಅಲೆದಾಡುತ್ತಿದ್ದಾಗ, ಅಣುಮಂತ್ರಾಲಯದ ( ತುಂಗಭದ್ರಾ/ ಮಂತ್ರಾಲಯಂ ರೋಡ್) ಮಠದಲ್ಲಿ ಸೋದರತ್ತೆ ಮತ್ತು ಮಾವನವರಾದ “ನರಸಿಂಹಚಾರ ವಡಗೆರಿ”ಅವರ ಮೂಲಕ ನಾಲ್ಕಾರು ತಿಂಗಳು ಅನ್ನು,ನೀರು ನೆರಳನ್ನು ನೀಡಿ ದಾರಿದೀಪವಾದವರು ರಾಯರು. ಎಲ್ಲೆ ಇದ್ದರು ಪ್ರತಿವರ್ಷ ಬಿಡದೆ ಗುರುಗಳು ಆರಾಧನೆಯಲ್ಲಿ ಪಾಲ್ಗೊಂಡು ಕೈಲಾದ ಸೇವೆಯನ್ನು ಮಾಡಿಕೊಂಡು ಬಂದ ನನಗೆ ಲಂಡನ್ನಲ್ಲಿ ಅದು ತಪ್ಪಿ ಹೋಗಬಹುದೆನೊ ಎನ್ನುವ ಆತಂಕದೊಂದಿಗೆ ೨೦೧೭ರಲ್ಲಿ ಹುಡುಕಾಟ ಆರಂಭಿಸಿ ಮೊದಲ ಬಾರಿಗೆ ಪೂರ್ವಾರಾಧನೆಯಂದು ಹೋದಾಗ ಸರಿಯಾಗಿ ದಾರಿಯನ್ನು ಅರಿಯದೆ ಮತ್ತೆ ನಿರಾಸೆಯಿಂದ ಹಿಂತಿರುಗಿ ಬರಬೆಕಾಯಿತು.ಮನದಲ್ಲೆನೊ ಅಳುಕು, ಗುರುಗಳು ಇಲ್ಲಿ ನಮ್ಮ ಸೇವೆಯನ್ನು ಸ್ವೀಕರಿಸಿ ಉದ್ಧರಿಸಲು ಇನ್ನೂ ಮನಸು ಮಾಡಿರಲಿಕ್ಕಿಲ್ಲಾ ಅಂದುಕೊಂಡು ಸುಮ್ಮನಾದೆ. ಆದರೆ ಮರುದಿನ ಪ್ರೇರಣೆಯಂತೆ ಮತ್ತೆ ಪ್ರಯತ್ನಮಾಡಿದಾಗ ಕಾಣಿಸಿದ್ದು “ಜಿ ಬಿ ಎಸ್‌.ಆರ್.ಎಸ್.ಬೃಂದಾವನ” ಜೋತೆಗೆ ಅದೃಷ್ಟದ ಬಾಗಿಲು ತೆರೆದು ಭವ್ಯವಾದ ದರ್ಶನದೊಂದಿಗೆ ಯತೆಚ್ಛವಾಗಿ ಗುರುಗಳನ್ನು ಭಜಿಸುವ ಅವಕಾಶ. ಗುರುತು ಪರಿಚಯವಿಲ್ಲದ ನಾಡು ಹಾಗಾಗಿ ಕೇವಲ ದರ್ಶನಾರ್ಥಿಗಳಾಗಿ ಹೋಗಿದ್ದ ನಮಗೆ ಅಂದು ಮಧ್ಯಾರಾಧನೆಯಾದುದ್ದರಿಂದ ತೀರ್ಥಪ್ರಸಾದಗಳು ದೊರೆಯುವಂತಾಯಿತು. ಅಲ್ಲಿಂದ ಮೂರು ವರ್ಷಗಳಕಾಲ ಬಿಡುವಾದಾಗಲೆಲ್ಲಾ ಹೊಗುತ್ತಿದ್ದುದ್ದರಿಂದ ಹಲವಾರು ಬಾರಿ ಮನಸ್ಸಿಗೆ ತೃಪ್ತಿಯಾಗುವಷ್ಟು ಗೊತ್ತಿರುವ ಎಲ್ಲಾ ದೇವರ ನಾಮಗಳನ್ನು ಹಾಡಿ ಆನಂದಿಸುವ ಅವಕಾಶ ದೊರೆತಿದ್ದು ಚಿರಸ್ಮರಣಿಯ. ಬಿಡುವಾದಗಲೆಲ್ಲಾ ಮಠದ ಬೇಟಿ ನೀಡುತ್ತಿದ್ದುದ್ದರಿಂದ ಇಲ್ಲಿನ ಮಠದಲ್ಲಿನ್ನ ದಿನ ನಿತ್ಯದ ಆಗುಹೋಗುಗಳ ಬಗ್ಗೆ ಹೆಚ್ಚಿನದನ್ನು ತಿಳಿಯುವ ಅವಕಾಶ ದೊರೆಯಿತು. ವೃಂದಾವನ ಪ್ರತಿಸ್ಟಾಪಿಸಿದ್ದರಿಂದ ತಪ್ಪದೆ ದಿನ ನಿತ್ಯ ಪೂಜೆ ಅಭಿಷೇಕ ನೈವೇದ್ಯ ಹಸ್ತೋದಕಗಳನ್ನು ತಪ್ಪಿಸುವಂತಿರಲಿಲ್ಲ ಆದರೆ ಅದನ್ನು ನೆರೆವೆರಿಸಿಕೊಂಡು ಹೋಗಲು ನುರಿತ ಅರ್ಚಕರು ಲಭ್ಯವಿರಲಿಲ್ಲವಾದ್ದರಿಂದ ವಿಶ್ವಸ್ಥ ಸ್ವಯಂ ಸೇವಕರಲ್ಲೆ ಪೂಜಾ ವಿಧಿ ವಿಧಾನಗಳನ್ನು ಅರಿತಿರುವ ಕೆಲವರು ಅದನ್ನು ನೋಡಿಕೊಂಡು ಹೋಗುತ್ತಿದ್ದದ್ದು ಗಮನಾರ್ಹ ಹಾಗೂ ವಾರದ ಬೆರೆ ದಿನಗಳಲ್ಲಿ ಭಕ್ತರ ಭೇಟಿ ಅಷ್ಟೊಂದು ಇಲ್ಲದೆ ಇದ್ದ ಕಾರಣ ಕೇವಲ ಶನಿವಾರ ಮತ್ತು ಭಾನುವಾರಗಳಂದು ಮಾತ್ರ ಭಕ್ತರಿಗೆ ದರ್ಶನದ ಅವಕಾಶ ಒದಗಿಸಲಾಗುತ್ತಿತ್ತು.

೨೦೧೮-೧೯ ರಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯವರಾದ ನುರಿತ ಪಂಡಿತರೊಬ್ಬರನ್ನು ಕರೆತಂದು ಅವರು ಮೂಲಕ ಇಲ್ಲಿನ ರಾಯರ ಭಕ್ತವೃಂದಕ್ಕೆ ವಿಧಿವತ್ತಾಗಿ ಆರಾಧಿಸುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಸತತವಾಗಿ ಬಿಡದೆ ಪ್ರತಿ ಶನಿವಾರ ಸಂಜೆ ವಿಷ್ಣುಸಹಸ್ರನಾಮ ಪಾರಾಯಣ, ಹನುಮಾನ್ ಛಾಲೀಸ್‌ ಪಟನೆ, ದೇವತೆಗಳ ತಾರತಮ್ಯ ಆಧಾರಿತ ಭಜನೆ,ಸ್ವಸ್ತಿ ವಾಚನಗಳನ್ನು ನಡೆಸಿಕೊಂಡು ಬರುತ್ತಿದ್ದುದ್ದಲ್ಲದೆ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯನ್ನು ಪ್ರತಿವರ್ಷ ವಿಜ್ರಂಭಣೆಯಿಂದ ಆಚರಿಸುತ್ತಾ ಸಾವಿರಕ್ಕೂ ಹೆಚ್ಚು ಭಕ್ತರು ಕುಟುಂಬ ಸಹಿತವಾಗಿ ಆರಾಧಿಸುತ್ತಾ ಬಂದಿರುವುದು ಅತ್ಯಂತ ಸಂತೋಷವನ್ನು ಉಂಟುಮಾಡಿದ ಸಂಗತಿ.ಮಠದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿರ್ಥಪ್ರಸಾದಗಳನ್ನು ಸ್ವೀಕರಿಸಿ ನಡೆ ಹಲವು ಸಂಗೀತ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೆನೆ. ಅದರಲ್ಲಿ ನಾನು ನೆನಪಿನಲ್ಲಿ ಇಡಬಹುದಾದ ಹಲವುಗಳಲ್ಲಿ ಮಧ್ವನವಮಿ, ಆರಾಧನೆ ಇನ್ನಿತರ ಹಬ್ಬಗಳ ಆಚರಣೆ ಅದರ ಜೋತೆಗೆ ಖ್ಯಾತ ಹಿಂದುಸ್ಥಾನಿ ಗಾಯಕರಾದ “ಜಯತೀರ್ಥ ಮೇವುಂಡಿ” ಯವರು ಕಾರ್ಯಕ್ರಮಗಳ ನಿಮಿತ್ಯ ಲಂಡನಗೆ ಬಂದಾಗ ಮಠಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ಕಳೆದ ಕೆಲವು ಕ್ಷಣಗಳು.

ಆದರೆ ಕಳೆದ ವರ್ಷ ಕರೋನಾದ ಹೊಡೆತದಿಂದ ಮುಚ್ಚಿದ ಮಠದ ಬಾಗಿಲು ಶ್ರೀಮಠದ ಭಕ್ತರಿಗೆ ಆರಾಧನೆಯಲ್ಲಿ ಪಾಲ್ಗೊಳ್ಳಲು ಮತ್ತು ವೃಂದಾವನದ ದರ್ಶನವನ್ನು ಮಾಡಕೊಳ್ಳಲು ಅವಕಾಶ ಮಾಡಿಕೊಟ್ಟಿರಲಿಲ್ಲ ಆದರೆ ಇನ್ನೂ ಕೇಲವೆ ದಿನಗಳಲ್ಲಿ ಅಂದರೆ ಇದೆ ತಿಂಗಳು ೨೩,೨೪ ಹಾಗೂ ೨೫ನೇ ತಾರಿಖನಂದು ಬರಲಿರುವ ಈ ವರ್ಷದ ಆರಾಧನೆಯಲ್ಲಾದರು ಗುರುಗಳು ನಮಗೆ ದರುಶನ ಭಾಗ್ಯ ಕರುಣಿಸುವರೆ ಎಂದು ಎದಿರು ನೋಡುತ್ತ ಹಾಗೂ ದರ್ಶನ್ ಭಾಗ್ಯ ಕರುಣಿಸುವಂತೆ ಪ್ರಾರ್ಥಿಸುತ್ತಾ ಒಂಟಿ ಕಾಲಿನ ಮೇಲೆ ನಾನು ನನ್ನ ಮಡದಿ ಮಕ್ಕಳೊಂದಿಗೆ ಆ ದಿನದ ಬರುವಿಕೆಗಾಗಿ ಕಾಯುತ್ತಿದ್ದೆವೆ. ಅವಕಾಶ ದೊರೆತಲ್ಲಿ ದರುಶನ ಭಾಗ್ಯದ ಅನುಭವ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೧೫-ಅಗಷ್ಟ್-೨೦೨೧

Leave a Reply

Your email address will not be published. Required fields are marked *