ಮಾಯದಂತ ಮಳೆ ಬಂತಣ್ಣ ಮದಗಾನ ಕೆರೆಗೆ…!!

ಈಗ ಭಾರತದಲ್ಲಿ ಮಳೆಗಾಲದ ಸಮಯವಾದರೆ ಇಲ್ಲಿ ಇಂಗ್ಲೆಂಡಿನಲ್ಲಿ ಬೆಸಿಗೆ ಕಾಲ. ಮಳೆಯ ಬರುವಿಕೆಯಿಂದ ಆಹ್ಲಾದಕರವೆಷ್ಟೊ ಅದಕ್ಕಿಂತ ಹೆಚ್ಚು ಅದರಿಂದಾಗುವ ಅವಾಂತರಗಳು ಯಾವಾಗಲು ಜನಸಾಮಾನ್ಯರನ್ನು ಹೈರಾಣ ಮಾಡುವುದೆ ಹೆಚ್ಚು. ಚಿಕ್ಕವನಿದ್ದಾಗ ಹುಟ್ಟಿಬೆಳೆದ ಊರಾದ ದೇವದುರ್ಗ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದುದ್ದರಿಂದ ( ಈಗಲೂ ಅದು ಆ ಸ್ಥಾನವನ್ನು ಕಾಯ್ದಿರಿಸಿಕೊಂಡಿರಬಹುದು ಎಂದು ನನ್ನ ಭಾವನೆ) ಋತುಮಾನ ಯಾವುದಾದರು ಸರಿ ಅಲ್ಲಿ ಸಾಮಾನ್ಯ ಜನರಾದ ನಮ್ಮಂತವರಿಗೆ ಅಡಚಣೆಗಳು ತೊಂದರೆಗಳು ಸರ್ವೆ ಸಾಮಾನ್ಯ. ಬೆಸಿಗೆಯಾದರೆ ನದಿ ಬಾವಿ ಕೆರೆಯಲ್ಲಿ ನಿರಿಲ್ಲದ ಸಮಸ್ಯೆ ಒಂದಡೆಯಾದರೆ […]

Continue Reading

ಸ್ನೇಹ ಅಂದ್ರೆನೆ ಹಾಗೆ…!!

ಸ್ನೇಹ ಅಂದ್ರೆನೆ ಹಾಗೆಬೆಳೆಯೊ ಮರ ನಾವಾದರೆ ಅದಕ್ಕೆಅಪ್ಪಿಕೊಂಡು ಅಂಕು ಡೊಂಕನ್ನುಒಪ್ಪಿಕೊಂಡು ಹರಡೊ ಬಳ್ಳಿ ಇದ್ದಹಾಂಗೆ… ಸ್ನೇಹ ಅಂದ್ರೆನೆ ಹಾಗೆದಿನ ಓದುವ ಪತ್ರಿಕೆಯೆ ನಾವಾದರೆ, ಅದರಒಳಗೆ ಸದ್ದು ಮಾಡುವ ಮುಖ್ಯ –ಸುದ್ದಿ ಇದ್ದಹಾಂಗೆ… ಸ್ನೇಹ ಅಂದ್ರೆನೆ ಹಾಗೆಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ನಾವುಹೊರಟರೆ, ನಮ್ಮೊಂದಿಗೆ ಜೋತೆಯಲ್ಲಿಬರುವ, ಬಂದು ಆಹ್ಲಾದಕರವಾಗಿ ಬೀಸುವತಂಗಾಳಿ ಇದ್ದಹಾಂಗೆ… ಸ್ನೇಹ ಅಂದ್ರೆನೆ ಹಾಗೆನಾವು ತಿನ್ನುವ ತಿಂಡಿಯಲ್ಲಿಖಾರಭಾತನೊಂದಿಗೆ ಕೆಸರಿಭಾತನ್ನು, ಇಡ್ಲಿಜೋತೆಯಲ್ಲಿ ಸಾಂಬಾರನ್ನು, ದೋಸೆ-ಯೊಂದಿಗೆ ಚಟ್ನಿಯನ್ನು ಸೇರಿಸಿ ಸವಿದಂಗೆ… ಸ್ನೇಹ ಅಂದ್ರೆನೆ ಹಾಗೆಕಣ್ಣಿಗೆ ಕಾಣುವ ಈ ದೇಹ ನಾವಾದರೆಕಂಡರು ಕಾಣದಿದ್ದರು ನಮ್ಮೊಂದಿಗೆ […]

Continue Reading
ಕನ್ನಡ ಕಲಿ ಶಾಲೆಗಳ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕರೆಯೋಲೆ

ಪ್ರೀತಯ ಮುದ್ದು ಮಕ್ಕಳಿ ವರ್ಷವೆಲ್ಲಾ ಕಷ್ಟಪಟ್ಟಾಯಿತು ಕನ್ನಡ ಕಲಿಯಲು ಇಷ್ಟಪಟ್ಟಾಯಿತು ಸಾಕಷ್ಟು ಸಮಯ ಅದಾಗಲೆ ಕೊಟ್ಟಾಯಿತ ಹಾಗಿದ್ದಮೇಲೆ ಕಲಿಯುವ, ಕಲಿಸುವ ಹಾಗೂ ಕಲಿಕೆಯ ಸಂಭ್ರಮವು ಆಗಬೆಕಲ್ಲವೆ..? ಇಗೋ ಆ ಸಂಭ್ರಮದ ಸಮಯವು ಬಂದಾಯಿತು ಅದರ ಕರೆಯೋಲೆ ನಿಮಗಾಗಿ ಸಿದ್ಧವಾಗಿ ನಿಮ್ಮನ್ನು ತಲುಪಿ ಕಾತುರದಿಂದ ನಿವುಗಳೆಲ್ಲರು ಬರುವುದನ್ನು ಜೋತೆಗೆ ನಿಮ್ಮ ಸ್ನೇಹಿತರನ್ನು ಕರೆತರುವುದನ್ನು ಸ್ವಾಗತಿಸಲು ನಾವು ತುದಿಗಾಲ ಮೇಲೆ ನಿಂತು ಕಾಯುವ ಸರದಿ ಬಂದಾಯಿತು. ನೀವೆಲ್ಲರೂ ಬರುತ್ತೀರಿಯಲ್ಲವೆ? ನೀವೂ ಬನ್ನಿ ನಿಮ್ಮ ಮನೆಯವರನ್ನು ಮತ್ತು ಸ್ನೇಹಿತರನ್ನು ಕರೆತನ್ನಿ. ನಿಮಗಾಗಿ […]

Continue Reading
ಕನ್ನಡ ಕಲಿ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಜೋತೆಗೂಡಿ ನಲಿ-೨

ಆತ್ಮೀಯ ಪೋಷಕರೆ,ಎಲ್ಲರಿಗೂ ಹೃದಯ ಪೂರ್ವಕ ನಮಸ್ಕಾರಗಳು ಹಾಗೂ ಈ ದಿನದ ಶುಭಾಶಯಗಳು…!! ಕಳೆದ ಹಲವಾರು ವರ್ಷಗಳಿಂದ ತಾವೆಲ್ಲರೂ ನಮ್ಮ ಬೆನ್ನಹಿಂದೆ ನಿಂತು ನಮ್ಮ ನಿಮ್ಮೆಲ್ಲರ ಮಾತೃಭಾಷೆ ಯಾದ ಕನ್ನಡವನ್ನು ಮಕ್ಕಳಿಗೆ ಕಲಿಸಲಿಕ್ಕಾಗಿ ಎಡೆ ಬಿಡದೆ ತೊಡಗಿಸಿಕೊಂಡಿರುವ “ಕನ್ನಡಿಗರು ಯುಕೆ” ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಕನ್ನಡ ಕಲಿ” ಯ ಭಾಗವಾಗಿ ಅದರ ಇಂದಿನ ಯಶಸ್ಸಿಗೆ ನೀವು ಸಂಪೂರ್ಣವಾಗಿ ಭಾಜನರಾಗಿದ್ದಿರಿ. ನಿಮ್ಮ ಆಕಾಂಕ್ಷೆ, ಅಭಿಮಾನ,ಕನ್ನಡದ ಮೇಲಿನ ಪ್ರೀತಿ ಮತ್ತು ಅದನ್ನು ನಮ್ಮ ಮಕ್ಕಳಿಗೆ ಕಲಿಸಬೇಕೆಂಬ ಹೆಬ್ಬಯಕೆಯ ಬಲವೆ ನಮ್ಮ […]

Continue Reading

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅನಿವಾಸಿ ಶಿಕ್ಷಕ ಶಿಕ್ಷಕಿಯರಿಗೆ ಕನ್ನಡ ಕಲಿ ಶಿಬಿರ

ಬೇಸಿಗೆ ಕಾಲ ಶಿಬಿರಗಳಿಗೆ ಹೇಳಿ ಮಾಡಿಸಿದಂತಹ ಸಮಯ ಹಾಗೂ ಬಹುತೇಕ ಸಂಯೋಜಕರು ಶಿಬಿರಗಳನ್ನು ಬೇಸಿಗೆಯಲ್ಲಿಯೇ ಎರ್ಪಡಿಸಲು ಇಷ್ಟಪಡುವಂತಹದು ಹಾಗೂ ಬಿರಿಬಿಸಿಲು ಒಂದನ್ನು ಬಿಟ್ಟರೆ ಹೆಚ್ಚೇನೂ ಹವಾಮಾನ ವೈಪರಿತ್ಯಗಳನ್ನು ಎದಿರು ನೋಡದ ಸಮಯ.  ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನರು ಕರೋನಾ ಮತ್ತು ಅದರ ನಿರ್ಭಂಧಗಳ ಬವಣೆಯಿಂದ ತತ್ತರಿಸಿ ಅದರಿಂದ ಹೊರಬಂದು ಅತ್ಯಂತ ಕುತೂಹಲದಿಂದ ಈ ಬಾರಿಯ ಬೇಸಿಗೆಯನ್ನು ಎದಿರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ  ಸಿಂಗಾಪುರ್, ಯುಕೆ, ಯುರೊಪ್, ಘಲ್ಫ್ ಹಾಗೂ ಅಮೇರಿಕಾದ ಕೆಲವು ಪ್ರದೇಶಗಳಲ್ಲಿ ಕನ್ನಡವನ್ನು ಕಲಿಸುತ್ತಿರುವ ಅನಿವಾಸಿ ಕನ್ನಡ […]

Continue Reading

“ಕನ್ನಡ ಕಲಿ” ಜೋತೆ ಗೂಡಿ ನಲಿ

ಆತ್ಮೀಯ ಶಿಕ್ಷಕ ಶಿಕ್ಷಕಿಯರೆ, ಎಲ್ಲರಿಗೂ ಹೃದಯ ಪೂರ್ವಕ ನಮಸ್ಕಾರಗಳು ಹಾಗೂ ಈ ದಿನದ ಶುಭಾಶಯಗಳು…!! ಕಳೆದ ಒಂದು ವರ್ಷದಿಂದ ತಾವೆಲ್ಲರೂ ಎಲೆ ಮರೆಯ ಕಾಯಿಯಂತೆ ನಮ್ಮ ಹಿಂದೆ ನಿಂತು ತಮ್ಮನ್ನು ತಾವು ಎಡೆ ಬಿಡದೆ ತೊಡಗಿಸಿಕೊಂಡು “ಕನ್ನಡಿಗರು ಯುಕೆ” ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಕನ್ನಡ ಕಲಿ” ಯ ಭಾಗವಾಗಿ ಅದರ ಇಂದಿನ ಯಶಸ್ಸಿಗೆ ನೀವು ಸಂಪೂರ್ಣವಾಗಿ ಭಾಜನರಾಗಿದ್ದಿರಿ. ನಿಮ್ಮ ಸೇವಾ ಮನೋಭಾವ,ಕನ್ನಡದ ಮೇಲಿನ ಪ್ರೀತಿ ಮತ್ತು ಅದನ್ನು ಮಕ್ಕಳಿಗೆ ಕಲಿಸಬೇಕೆಂಬ ಹೆಬ್ಬಯಕೆಯ ಬಲವೆ ನಮ್ಮ “ಕನ್ನಡ […]

Continue Reading

ಬ್ಲಾಕ್‌ಪಾರ್ಕ – ಸ್ಲೌವ್

ಸ್ಲೌವ್ (Slough) ಪಟ್ಟಣದಿಂದ ಕೆವಲ ೧೫ ನಿಮಿಷಗಳ (೪.೫ ಮೈಲಿ) ದೂರದಲ್ಲಿದಕ್ಷಿಣ “ಬಕಿಂಗ್‌ಹ್ಯಾಮ್ ಶೈರ್” ನ ಸುಮಾರು ೫೦೦ ಎಕರೆಗಳಿಗೂ ಹೆಚ್ಚು ವಿಸ್ತೀರ್ಣವಾದ ಪ್ರದೇಶದಲ್ಲಿ ಅರಣ್ಯ, ಜೌಗೂ ಹಾಗೂ ಸಮತಟ್ಟಾದ ಪ್ರದೇಶಗಳಿಂದ ಕೂಡಿದ ಉದ್ಯಾನವನದ ಹೆಸರೆ “ಬ್ಲಾಕ್‌ಪಾರ್ಕ” ಎಂದು. ಇದ ಸುಮಾರು ೧೪ ಎಕರೆಗಳಿಗಿಂತ ದೊಡ್ಡದಾದ ಸರೋವರವನ್ನು ಹೊಂದಿದ್ದು ಸುತ್ತಮುತ್ತಲಿನ ಪ್ರಾಣಿ, ಪಕ್ಷಿ ಸಂಕುಲಗಳಿಗೆ ಮತ್ತು ಜಲಚರ ಜೀವಿಗಳಿಗೆ ಆಸರೆಯಾಗಿದೆ. ಸಾಕು ಪ್ರಾಣಿಗಳ ಜೋತೆ ಸ್ನೇಹಿತರೊಂದಿಗೆ ಮನೆ ಮಂದಿಯೆಲ್ಲಾ ಸೆರಿಕೊಂಡು ವಾಯು ವಿಹಾರ, ಸೈಕ್ಲಿಂಗ್, ಜಾಗಿಂಗ್, ರನ್ನಿಂಗ್ […]

Continue Reading

“ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ ಎಲ್ಲರಿಗೂ ದೊರೆಯುವಂತಾಗಬೇಕು”

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು  “ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ ಎಲ್ಲರಿಗೂ ದೊರೆಯುವಂತಾಗಬೇಕು” ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಕನ್ನಡ ನಾಡಿನ ಮತ್ತು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡಿದ ಪ್ರಖ್ಯಾತ ಮೈಸೂರು ಸಂಸ್ಥಾನದ ೨೪ನೇಯ ರಾಜನಾಗಿ ಸಿಂಹಾಸನವನ್ನು ಅಲಂಕರಿಸಿದ್ದ “ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್” ಅವರ ಜನ್ಮದಿನಾಚರಣೆ ಪ್ರಯುಕ್ತ ಅನಿವಾಸಿ ಕನ್ನಡಿಗರ ಪರವಾಗಿ ಶತ ಶತ ನಮನಗಳು.  ಛಾಯಾಚಿತ್ರ ಕೃಪೆ : ವಿಕಿಪೀಡಿಯ/ಅಂತರ್ ಜಾಲ.

Continue Reading

ಅರವತ್ತಕ್ಕೂ ಹೆಚ್ಚು ಕಲಾವಿದರಿಂದ “ಲೈವ್ ಫಾರ್ ಕರ್ನಾಟಕ” ಎನ್ನುವ ವಿಶಿಷ್ಠವಾದ ೧೨ ಗಂಟೆಗಳ ಕಾರ್ಯಕ್ರಮ

ಕೋವಿಡ್ ಸಂತ್ರಸ್ತರ ಸಹಾಯಕ್ಕಾಗಿ ಅರವತ್ತಕ್ಕೂ ಹೆಚ್ಚು ಕಲಾವಿದರಿಂದ “ಲೈವ್ ಫಾರ್ ಕರ್ನಾಟಕ” ಎನ್ನುವ ವಿಶಿಷ್ಠವಾದ ೧೨ ಗಂಟೆಗಳ ಕಾರ್ಯಕ್ರಮ ಇದೆ ಶನಿವಾರ (೫-ಜೂನ್-೨೦೨೧) ಮಧ್ಯಾನ ೧೨ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆಯವರೆಗೆ. ದೇಣಿಗೆ ನೀಡಲು ಈ ಕೆಳಗಿನ ಲಿಂಕ್ ಬಳಸಿ: https://liveforkarnataka.com ಯುಕೆ ಮತ್ತು ಯೂರೋಪ್ ಕನ್ನಡಿಗರಿಗಾಗಿ “ಕನ್ನಡಿಗರು ಯುಕೆ” ಮತ್ತು “ಕೆಯುಕೆ ಟಾಲ್ಕೀಸ್” ಫೆಸ್ ಬುಕ್ ಪುಟಗಳಲ್ಲಿ ನೇರಪ್ರಸಾರ… ನಿರೀಕ್ಷಿಸಿ…!!

Continue Reading