ಕನ್ನಡದ ಹಬ್ಬ…!!

Events

ನವೆಂಬರ್ ಮತ್ತೆ ಬಂದಾಯಿತು
ಈ ವರ್ಷದ ಕನ್ನಡ ರಾಜ್ಯೋತ್ಸವದ
ಹಬ್ಬ ಮತ್ತೋಮ್ಮೆ ಸಡಗರದಿಂದ
ಆಚರಿಸಿದ್ದಾಯಿತು…

“ಕನ್ನಡಿಗರು ಯುಕೆ” ಹೊಚ್ಚ ಹೊಸ
ಮುಖಗಳಿಂದ ಕೂಡಿ ಕಂಗೊಳಿಸುತ್ತಿತ್ತು
ಮತ್ತೋಮ್ಮೆ ಯುನೈಟೆಡ್ ಕಿಂಗ್ಡಮ್‌ನಲ್ಲಿ
ಕನ್ನಡದ ತೇರನ್ನೇಳೆದು ಜಾತ್ರೆ ಮಾಡಾಯ್ತು…

ವಿಶ್ವಕ್ಕೆ ಈ ಸಂಗತಿ ಎಷ್ಟರ ಮಟ್ಟಿಗೆ
ಮುಟ್ಟಿತೋ ಇಲ್ಲಾ ಬಿಟ್ಟೀತೋ ?
ವಿಶ್ವ (ಭಟ್‌ ಸರ್) ದರ್ಶನದ ಕನಸು
ನನಸಾಯ್ತು, ವಿಶ್ವ (ಭಟ್ ಸರ್ ಅವರ)
ವಾಣಿಯನ್ನೂ ಕೇಳುವಂತಾಯಿತು…

ಬೈಹ್ರೀನ್‌ ನಿಂದು ಅಕ್ಷರ ಲೋಕವನ್ನು
ಬೆಳಗುತ್ತಿರುವ ಕಿರಣವೊಂದು…
ಹರಿದು ಬಂದಿತ್ತು, ಅದು ತನ್ನ ಹೊಳೆಯುವ
ಬೆಳಕಿನಿಂದ ಅಲ್ಲಿ ಕಂಗೊಳಿಸುತ್ತಿತ್ತು…

ಜೊತೆಗೆ ಸಂಗೀತ ಮಾಂತ್ರಿಕರೊಬ್ಬರು
ಬಂದು ಇಳಿದಹಾಗಿತ್ತು…
ಗಣೇಶ ದೇಸಾಯಿಯವರ‌ ಸಂಗೀತ
ಗಂಧರ್ವ ಲೋಕಕ್ಕೆ ಎಲ್ಲರನ್ನೂ
ಸೆಳೆದುಕೊಂಡು ಹೋಗಿತ್ತು…

ನವೆಂಬರ್ ಮತ್ತೆ ಬಂದಾಯಿತು
ಈ ವರ್ಷದ ಕನ್ನಡ ರಾಜ್ಯೋತ್ಸವದ
ಹಬ್ಬ ಮತ್ತೋಮ್ಮೆ ಸಡಗರದಿಂದ
ಆಚರಿಸಿದ್ದಾಯಿತು…

-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೦೫-ನವೆಂಬರ್-೨೦೨೨

Leave a Reply

Your email address will not be published. Required fields are marked *