ಉದಯಿಸುವ ರವಿಯಂತೆ
ನಮ್ಮಯ ಈ ನುಡಿ ಕನ್ನಡ…
ತಂಪೆರೆದು ಬೆಳದಿಂಗಳ ಚಲ್ಲುವ
ಚಂದಿರನಂತೆ ಈ ಸವಿಗನ್ನಡ…
ಸುರಿಯುವ ಮಳೆಯಂತೆ
ಈ ಸಿರಿಗನ್ನಡ…
ಹರಿಯುವ ಹೊಳೆಯಂತೆ
ನಮ್ಮಯ ಈ ನುಡಿ ಕನ್ನಡ…
ಆಗಸದ ವಿಶಾಲತೆಯಂತೆ
ನಮ್ಮಯ ಈ ಸಿರಿಗನ್ನಡ…
ಬೊರ್ಗೆರೆಯುವ ಕಡಲಿನ
ಮೊರೆತಕ ಸಮವಿದು ಸವಿಗನ್ನಡ…
ಹೆಳುತ್ತಿದ್ದಾರೆ ಕನ್ನಡ ಕಳೆದು
ಹೋಗುವುದಂತೆ,
ಕೆಳಿದರೆ ಅನುಸುತ್ತದೆ ಅಲ್ಲಿ
ನಡಿಯುತ್ತಿರಬಹುದೆ ಹುಚ್ಚರ ಸಂತೆ
ನಾವು ಕನ್ನಡ ಉಳಿಸುವುದಂತೆ
ಬೆಳಿಸುವುದಂತೆ, ಎಲ್ಲವೂ
ಹಸಿ ಸುಳ್ಳಿನ ಕಂತೆ…
ಕನ್ನಡವೋ ದಿನ ಬೆಳಗುವ ಆ
ಸೂರ್ಯನಿದ್ದಂತೆ…
-ಗೋವರ್ಧನ್ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೦೫-ನವಂಬರ್-೨೦೨೨