ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ- ಜೂನ್ ೫ ೨೦೨೧

Uncategorized

ನಾವು ಪ್ರಕೃತಿಗೆ ಸಲ್ಲುತ್ತೆವೆ, ನಮಗೆ ಪ್ರಕೃತಿ ಸಲ್ಲುವುದಿಲ್ಲ. ಈ ಮಾತು ಅಕ್ಷರಶಃ ಸತ್ಯ. ಪರಿಸರ ಮನುಷ್ಯನಿಗೆ ಏನೇನು ಕೊಟ್ಟಿಲ್ಲ? ನಮ್ಮ ಬದುಕಿನ ಅಸ್ತಿತ್ವಕ್ಕೆ ಬುನಾದಿ ಈ ಪ್ರಕೃತಿ, ನಾವು ತಿನ್ನುವ ಆಹಾರ ಉಸಿರಾಡುವ ಗಾಳಿ ಎಲ್ಲವೂ ಪ್ರಕೃತಿಯ ದೇಣಿಗೆ. 

ಸೂರ್ಯಮಂಡಲದಲ್ಲಿ ಪೃಥ್ವಿಯಂಥ ಬೇರೊಂದು ಗ್ರಹವಿಲ್ಲ. ಇಲ್ಲಿನ ಪ್ರತಿ ಒಂದು ಜೀವರಾಶಿಯೂ ಈ ಭೂಮಿತಾಯಿಗೆ ಚಿರಋಣಿ. ತಲೆತಲಾಂತರಗಳಿಂದಲೂ ನಮ್ಮನ್ನು ಸಾಕಿ ಸಲಹುತ್ತಿರುವ ಈ ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ ? ಮಾಲಿನ್ಯ, ಶೋಷಣೆ, ಹಿಂಸೆ. ನಾವು ಈಗಲೂ ಯೆಚ್ಚರಗೊಳ್ಳಲಿಲ್ಲವೆಂದರೆ, ನಮ್ಮ ಮಕ್ಕಳು ಮೊಮ್ಮಕ್ಕಳು ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಡಿಜಿಟಲ್ ಉಪಕರಣಗಳಲ್ಲೆನೋಡಬೇಕಾದ ಪರಿಸ್ಥಿತಿ ಬರುವುದು ದೂರವಿಲ್ಲ. 

ಈಗ ಸಮಯ ಬಂದಿದೆ. ನಮ್ಮನ್ನು ನಾವು ಬದಾಯಿಲಿಸಿಕೊಳ್ಳಬೇಕು, ಈ ಪ್ರಕೃತಿಯ ಋಣವನ್ನು ತೀರಿಸಬೇಕು, ಅದರಿಂದ ಕಿತ್ತುಕೊಂದಂತಹ ನಿಧಿಗಳನ್ನು ಹಿಂತಿರುಗಿಸಬೇಕು. ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ ಎಂದು ಘೋಷಿಸಲಾಗಿದೆ. ಈ ದಿನವನ್ನು ವಿಶಿಷ್ಟವಾಗಿ ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಉಂಟುಮಾಡಿ ಅದರ ಸಂರಕ್ಷಣೆಯತ್ತ ಕೆಲಸ ಮಾಡಲು ಉತ್ತೇಜಿಸಲು ಈ ದಿನವನ್ನು ಆಯ್ದುಕೊಳ್ಳಲಾಗಿದೆ.

ಛಾಯಾ ಚಿತ್ರ ಕೃಪೆ - ಗೂಗಲ್
ಛಾಯಾ ಚಿತ್ರ ಕೃಪೆ – ಗೂಗಲ್

ಆದರೆ ಪರಿಸರ ಸಂರಕ್ಷಣೆಗೆ ಒಂದು ದಿನವೇಕೆ ನಮ್ಮ ಇಡೀ ಬದುಕನ್ನು ಆ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಿಸೋಣ. ಹನಿ ಹನಿ ಗೂಡಿದರೆ ಹಳ್ಳವೆಂಬಂತೆ, ಇವತ್ತಿನ ಒಂದೊಂದು ಸಸಿಯು ನಾಳೆಯ ಹೆಮ್ಮರಗಳು. ಗಿಡ ನೆಡಿ ಗಿಡ ನೆಡಿ ಗಿಡ ನೆಡಿ.. ಎಂದೋ ಕೇಳಿದ ಟಿ ವಿ ಜಾಹಿರಾತನ್ನು ಈಗ ಬದುಕಿನ ಒಂದು ಗುರಿಯಾಗಿಸೋಣ. ವಿಶ್ವ ಪರಿಸರ ಸಂರಕ್ಷಣೆ ದಿನವನ್ನು ನೀವು ಹೇಗೆ ಆಚರಿಸಿದಿರಿ ? ನಿಮ್ಮ ಛಾಯಾ ಚಿತ್ರಗಳನ್ನು kuktalkies@kannadigaruuk.com ಗೆ ಕಳುಹಿಸಿ ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಪ್ರಯತ್ನ ಎಲ್ಲರಿಗೂ ಮಾದರಿಯಾಗಲಿ !! 

Leave a Reply

Your email address will not be published. Required fields are marked *