ಮಂಸೋರೆ ಅವರ 19.20.21 ಚಲನ ಚಿತ್ರ ಈಗ ಯುಕೆಯಲ್ಲಿ ಬಿಡುಗಡೆ

Kannada Movies

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಈ ಹಿಂದೆ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಬಾರಿ ‘19.20.21’ ಹೆಸರಿನ ಒಂದು ನೈಜ ಘಟನೆ ಆಧಾರಿತ ಸಿನಿಮಾ ಮಾಡಿದ್ದಾರೆ.

ಕರ್ನಾಟಕದಲ್ಲಿ ಅತ್ಯುತ್ತಮ reviews ಪಡೆದು ಈಗ ಈ ಚಿತ್ರ ಯುನೈಟೆಡ್ ಕಿಂಗ್ಡಮ್ ನಲ್ಲಿ ತೆರೆ ಕಾಣಲಿದೆ. ಭಾನುವಾರ ಮಾರ್ಚ್ ೧೨ ರಂದು ಬ್ರಿಸ್ಟಲ್ ನಲ್ಲಿ ವಿಶೇಷ ಪ್ರದರ್ಶನಗೊಂಡು ಅಲ್ಲಿಯ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ.

೧೯.೨೦.೨೧ ಚಿತ್ರ ಸಿನೆವರ್ಲ್ಡ್ ನಾಲ್ಕು ಪ್ರದೇಶಗಳಲ್ಲಿ ಪ್ರಧರ್ಶನ ನೀಡಿದರೆ, ODEON ಸಿನಿಮಾ ಕೂಡ ನಾಲ್ಕು ಪ್ರದೇಶಗಳಲ್ಲಿ ಪ್ರದರ್ಶನ ನೀಡಿದೆ.

ಚಿತ್ರದ ಅಫೀಷಿಯಲ್ ಟ್ರೈಲರ್ Link : https://youtu.be/lHXehx-xf8E

ಚಿತ್ರದ ವಿಡಿಯೋ ರಿವ್ಯೂ

ಯುಕೆ ಕನ್ನಡಿಗರೆಲ್ಲರೂ ತಮ್ಮ ಹತ್ತಿರದ ಸಿನಿಮಾಗಳಿಗೆ ಹೋಗಿ ವೀಕ್ಷಿಸಿ, ಈ ರೀತಿಯ ಸಾಮಾಜಿಕ ಕಳಕಳಿಯಿರುವ ಸದಭಿರುಚಿ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡಿ.

1 thought on “ಮಂಸೋರೆ ಅವರ 19.20.21 ಚಲನ ಚಿತ್ರ ಈಗ ಯುಕೆಯಲ್ಲಿ ಬಿಡುಗಡೆ

  1. Our support should be there for every good movies of Kannada. I hope most of the UK Kannadigas take a pride, take your 3 hours time at the nearby cinemas and watch and support these heart wrenching, real life based, social drama.

Leave a Reply

Your email address will not be published. Required fields are marked *