೧.
ಬರೆಯುವವರಿಗೆ ಗೊತ್ತು
ಬರವಣಿಗೆಯ ಹಿಂದಿರುವ ಬವಣೆ…
ಬರದುದ್ದನ್ನು ಓದುಗರು ಮೆಚ್ಚಿದರೆ ಸಾಕು
ಅದೆ ಹಬ್ಬದಾಚರಣೆ…!!
೨.
ಕೆಲವರಿಗೆ ತಮ್ಮ ಸಾಧನೆಯಿಂದಲೆ
ಸುದ್ದಿಯಾಗಬೇಕೆಂಬ ಕಿಚ್ಚು…
ಇನ್ನೂ ಕೆಲವರಿಗೆ ಇನ್ನೊಬ್ಬರ ಸಾಧನೆಯಲ್ಲಿ ಅವರು ಕಡ್ಡಿಯಾಡಿಸುತ್ತ ಬೆಚ್ಚಗೆ
ಇರಬಹುದು ಎಂಬ ಹುಚ್ಚು…!!
೩.
ಅಡ್ಡದಾರಿ ಹಿಡಿಯುವುದಕ್ಕಿಂತ
ಗಡ್ಡಧಾರಿ ಯಾಗುವುದು ಲೇಸು…
ಜನರ ಜೀವನಕ್ಕಿಂತ ಮಿಗಿಲಾಗಿದೆ
ಇಂದು ಗಳಿಸುವುದು ಕಾಸು…!!
೪.
ಎಲ್ಲರೂ ಸುದ್ದಿಗಾಗಿ ಕಾಯುವುದೆ ಹೆಚ್ಚು…
ಕೆಲವರು ಸುದ್ದಿಯಾಗಿ ಹಚ್ಚುವರು ಕಿಚ್ಚು
ಹಲವರಿಗೆ ಇಲ್ಲಸಲ್ಲದ್ದನ್ನು ಸುದ್ದಿಯನ್ನಾಗಿ
ಮಾಡುವ ಹುಚ್ಚು…
೫.
ಬದುಕೆ ನೀ ಏಕೆ ಓಲಾಡುವೆ
ಅಲೆಗಳ ಮೇಲೆ ತೆಲಾಡುವ ಹಡುಗಿನ ಹಾಗೆ
ಹೊಳೆ ಹೊಳೆಯುತ ಆಗಸದಿಂದ
ಕಳೆಚಿ ಬೀಳುವ ನಕ್ಷತ್ರಗಳಂಗೆ..??
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೨೫-ಸೆಪ್ಟಂಬರ್-೨೦೨೧