ಕನ್ನಡ ಕಲಿ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಜೋತೆಗೂಡಿ ನಲಿ-೨

Events Kannada Kali

ಆತ್ಮೀಯ ಪೋಷಕರೆ,
ಎಲ್ಲರಿಗೂ ಹೃದಯ ಪೂರ್ವಕ ನಮಸ್ಕಾರಗಳು ಹಾಗೂ ಈ ದಿನದ ಶುಭಾಶಯಗಳು…!!

ಕಳೆದ ಹಲವಾರು ವರ್ಷಗಳಿಂದ ತಾವೆಲ್ಲರೂ ನಮ್ಮ ಬೆನ್ನಹಿಂದೆ ನಿಂತು ನಮ್ಮ ನಿಮ್ಮೆಲ್ಲರ ಮಾತೃಭಾಷೆ ಯಾದ ಕನ್ನಡವನ್ನು ಮಕ್ಕಳಿಗೆ ಕಲಿಸಲಿಕ್ಕಾಗಿ ಎಡೆ ಬಿಡದೆ ತೊಡಗಿಸಿಕೊಂಡಿರುವ “ಕನ್ನಡಿಗರು ಯುಕೆ” ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಕನ್ನಡ ಕಲಿ” ಯ ಭಾಗವಾಗಿ ಅದರ ಇಂದಿನ ಯಶಸ್ಸಿಗೆ ನೀವು ಸಂಪೂರ್ಣವಾಗಿ ಭಾಜನರಾಗಿದ್ದಿರಿ.

ನಿಮ್ಮ ಆಕಾಂಕ್ಷೆ, ಅಭಿಮಾನ,ಕನ್ನಡದ ಮೇಲಿನ ಪ್ರೀತಿ ಮತ್ತು ಅದನ್ನು ನಮ್ಮ ಮಕ್ಕಳಿಗೆ ಕಲಿಸಬೇಕೆಂಬ ಹೆಬ್ಬಯಕೆಯ ಬಲವೆ ನಮ್ಮ “ಕನ್ನಡ ಕಲಿ” ಯೋಜನೆ ಇಂದು ಅತ್ಯಂತ ಜನಪ್ರಿಯತೆಯನ್ನು ಘಳಿಸಲು ಸಾಧ್ಯವಾಗಿದೆ.

ಇಂತಹ ಒಂದು ಸುಸಂದರ್ಭವನ್ನು ಎಲ್ಲರೂ ಒಟ್ಟಾಗಿ ಸಂಭ್ರಮಿಸುವುದು ಬೆಡವೆ?

ಹಾಗಿದ್ದರೆ ಬನ್ನಿ ನಮ್ಮ ನಿಮ್ಮೆಲ್ಲರ ಈ ಯಶಸ್ಸಿನ ಸಂಭ್ರಮವನ್ನು ಆಚರಿಸಲು, “ಕನ್ನಡ ಕಲಿ” ತಂಡ ಮುಂಬರುವ ಜುಲೈ ೧೮ ರಂದು “ಕನ್ನಡ ಶಾಲೆಗಳ ವಾರ್ಷಿಕೋತ್ಸವ”ವನ್ನು ಆಯೋಜಿಸಲಾಗುತ್ತಿದ್ದು ತಾವೆಲ್ಲರೂ ಹುಮ್ಮಸ್ಸಿನಿಂದ ಬಂದು ಭಾಗವಹಿಸಿ ಹಾಗೂ ನಿಮ್ಮ ಮಕ್ಕಳನ್ನು ಭಾಗವಹಿಸಲು ಪ್ರೋತ್ಸಾಹಿಸಿ ಜೋತೆಗೆ ನಿಮ್ಮ ಸ್ನೇಹಿತರಿಗೂ ಭಾಗವಹಿಸಲು ಹುರಿದುಂಬಿಸಿ.

ವೀಶೆಷ ಕಾರ್ಯಕ್ರಮಗಳ ಪಟ್ಟಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಉಪಸ್ಥಿತಿಯನ್ನು ಎದಿರು ನೋಡುತ್ತಿರುವ…

ನಿಮ್ಮ ವಿಶ್ವಾಸಿ
“ಕನ್ನಡ ಕಲಿ” ಅಡ್ಮಿನ್ ಟೀಮ್

“ಕನ್ನಡಿಗರು ಯುಕೆ”
ಲಂಡನ್,ಯುನೈಟೆಡ್ ಕಿಂಗ್ಡಮ್

Leave a Reply

Your email address will not be published. Required fields are marked *