ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋದಾಗ, ಸಂಭವಿಸುವ ವೈಜ್ನ್ಯಾನಿಕ ಘಟನೆಯನ್ನು ಸೂರ್ಯ ಗ್ರಹಣ ಎಂದು ಹೇಳಲಾಗುತ್ತದೆ.
ಭೂಮಿಯನ್ನು ಸುತ್ತುವ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಚಂದ್ರನ ನೆರಳು ಭೂಮಿಗೆ ಬಿದ್ದು, ಸೂರ್ಯನ ಬೆಳಕು ಭೂಮಿಗೆ ಬೀಳದಂತೆ ಕತ್ತಲೆ ಆವರಿಸುವುದು. ಅದನ್ನು ಗ್ರಹಣ ಎಂದು ಕರೆಯಲಾಗುತ್ತದೆ. ಗ್ರಹಣವು ಖಗ್ರಾಸ ಅಥವ ಪಾರ್ಶ್ವವಾಗಿ ಸಂಭವಿಸಬಹುದು.
ಈ ವರ್ಷದ ಮೊದಲನೇ ಹಾಗು ಅತಿ ದೊಡ್ಡ ಸೂರ್ಯ ಗ್ರಹಣವು ಜೂನ್ ೧೦ ರಂದು ಸಂಭವಿಸಲಿದ್ದು ವಿಶೇಷವಾಗಿ ಯು.ಕೇ. ಹಾಗು ಯುರೋಪ್ ಗೆ ೨೦೧೫ ನಂತರ ಮೊದಲ ಬಾರಿಗೆ ಕಾಣಲಿದೆ.
ಇದು ಪಾರ್ಶ್ವ ಗ್ರಹಣವಾಗಿದ್ದು, ಸಮಯ ಬೆಳಿಗ್ಗೆ ೧೦:೦೦ ಗಂಟೆ ಇಂದ ಮಧ್ಯಾಹ್ನ ೧೨:೪೫ ಗಂಟೆಯ ವರೆಗೆ ಗೋಚರಿಸಲಿದೆ. ಯು ಕೇ ಮತ್ತು ಯುರೋಪ್ ನ ಹಲವಾರು ಜಾಗಗಳಲ್ಲಿ ವಿವಿಧ ಪ್ರತಿಶತಗಳಲ್ಲಿ ಜರುಗಲಿದ್ದು ಅತಿ ಹೆಚ್ಚಾಗಿ ನಾರ್ವೆ ದೇಶದ ಸ್ವಾಲ್ಬಾರ್ಡ್ ನಲ್ಲಿ 71% ಮತ್ತು ಐಸ್ಲ್ಯಾಂಡ್ ದೇಶದ ರಾಜಧಾನಿಯಾದ ರೆಕ್ಹಾವಿಕ್ ನಲ್ಲಿ 60% ಗ್ರಹಣವನ್ನು ಕಾಣಬಹುದು.
ಇದಲ್ಲದೆ ಯು.ಕೇ. ಯಲ್ಲಿ ಲಂಡನ್ ನಲ್ಲಿ 20%, ಮ್ಯಾಂಚೆಸ್ಟರ್ ನಲ್ಲಿ 25%, ಬರ್ಮಿಂಗ್ಹ್ಯಾಮ್ ನಲ್ಲಿ 23% ಹೀಗೆ ಗ್ರಹಣವು ಕಾಣಸಿಗುವುದು.
Society for Popular Astronomy (SPA) ರವರು ಯು. ಕೇ ಯ ಯಾವ ಜಾಗ ಮತ್ತು ಸಮಯಗಳಲ್ಲಿ ಗ್ರಹಣವು ಸಂಭವಿಸಲಿದೆ ಎಂದು ಕೆಳಕಂಡಂತೆ ವಿಸ್ತರಿಸಿದ್ದಾರೆ.
London, U.K: 20% at 11:13 a.m. BST
Manchester, U.K: 25% at 11:14 a.m. BST
Birmingham, U.K: 23% at 11:12 a.m. BST
Leeds, U.K: 26% at 11:15 a.m. BST
Glasgow, Scotland: 31% at 11:16 a.m. BST
Cardiff, Wales, U.K: 22% at 11:08 a.m. BST
Belfast, Northern Ireland, U.K: 31% at 11:11 a.m. BST
ಈ ಗ್ರಹಣದ ಮತ್ತೊಂದು ವೈಶಿಷ್ಟ್ಯತೆ ಎಂದರೆ ಬೆಂಕಿಯ ಉಂಗುರ. ಚಂದ್ರನಿಗೆ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚಲು ಆಗದೆ ಇದ್ದಾಗ ಸೂರ್ಯನು ಒಂದು ದೊಡ್ಡ ಬೆಂಕಿಯ ಉಂಗುರದಂತೆ ಕಾಣುತ್ತಾನೆ. ಈ ವಿದ್ಯಮಾನವನ್ನು ರಿಂಗ್ ಆಫ್ ಫೈರ್ ಎಂದು ಕೂಡ ಕರೆಯಲಾಗುತ್ತದೆ. ಇದೆ ಖಗ್ರಾಸ ಸೂರ್ಯ ಗ್ರಹಣ ವೆಂದು ಪ್ರತೀತಿ ಹೊಂದಿದೆ.
ಈ ವರುಷವು ಈ ಬೆಂಕಿಯ ಉಂಗುರವನ್ನು ಯು.ಯಸ್ , ಕೆನಡಾ ಮತ್ತು ಗ್ರೀನ್ಲ್ಯಾಂಡ್ ದೇಶಗಳಲ್ಲಿ ಅದರಲ್ಲೂ ಗ್ರೀನ್ಲ್ಯಾಂಡ್ನಲ್ಲಿ 89% ಅಷ್ಟು ನೋಡಬಹುದು.
ದುರಾದೃಷ್ಟವಶಾತ್ Covid ನಿರ್ಬಂಧನೆಗಳಿಂದ ಜನರು ಬೇರೆಲ್ಲೆಡೆಗೆ ಹೋಗಿ ಗ್ರಹಣದ ಸೌಂದರ್ಯವನ್ನು ಅನುಭವಿಸಲು ಸಾಧ್ಯವಿಲ್ಲ.
ಆದರೆ ನೆನಪಿಡಿ ಸೂರ್ಯ ಗ್ರಹಣದ ಅನುಭವ ಎಷ್ಟು ಚೆಂದವೋ ಆ ಸಮಯದಲ್ಲಿ ಜಾಗರೂಕತೆಯು ಅಷ್ಟೇ ಪ್ರಮುಖವಾದದ್ದು.
ಗ್ರಹಣದ ಸಮಯದಲ್ಲಿ ಸೂರ್ಯನ ಕಿರಣಗಳು ಅತ್ಯಂತ ಶಕ್ತಿಶಾಲಿಯಾಗಿದ್ದು U.V. ಕಿರಣಗಳು ಅತಿ ಹೆಚ್ಚು ಪ್ರಮಾಣದಲ್ಲಿ ವಾತಾವರಣದಲ್ಲಿ ಇರುತ್ತವೆ. ಆದರಿಂದ ಆ ಸಮಯದಲ್ಲಿ ಮನೆಯಿಂದ ಆಚೆ ಹೋಗುವುದನ್ನು ಮತ್ತು ಗ್ರಹಣವನ್ನು ಬರಿ ಕಣ್ಣಿನಿಂದ ವೀಕ್ಷಿಸುವುದನ್ನು ತಪ್ಪಿಸಬೇಕು. ಬರಿ ಕಣ್ಣಿನಿಂದ ಸೂರ್ಯನನ್ನು ನೋಡಿದರೆ ಕಣ್ಣಿಗೂ ಹಾನಿಉಂಟಾಗುತ್ತದೆ.
ಜನರು ಗ್ರಹಣದ ಅನುಭವ ಪಡೆಯಲೆಂದು ಅನೇಕ ವೈಜ್ನ್ಯಾನಿಕ ಸಂಸ್ಥೆಗಳು ವ್ಯವಸ್ಥೆ ಮಾಡುತ್ತವೆ. ಇವುಗಳಲ್ಲಿ ಲಂಡನ್ ನ ಗ್ರೀನ್ವಿಚ್ ಒಬ್ಸರ್ವೆಟರಿ ಒಂದು.ಇದಲ್ಲದೆ ಅನೇಕ ಜಾಲ ತಾಣಗಳು live streaming ಮೂಲಕ ಗ್ರಹಣವನು ಜನರಿಗೆ ನೇರವಾಗಿ ತಲುಪಿಸಲು ಸಹಾಯಕಾರಿಯಾಗಿವೆ.
ಮುಂದಿನ ಖಗ್ರಾಸ ಸೂರ್ಯಗ್ರಹಣವು ಯುರೋಪ್ ನಲ್ಲಿ ಅಕ್ಟೋಬರ್ ೨೫, ೨೦೨೨ ಮತ್ತು ಉತ್ತರ ಮತ್ತು ದಕ್ಷಿಣ ಅಮೇರಿಕಾ ದೇಶಗಳಲ್ಲಿ ಅಕ್ಟೋಬರ್ ೧೪, ೨೦೨೩ ರಲ್ಲಿ ಜರುಗಲಿವೆ.
ಲೇಖನದ ಮೂಲ www.forbes.com. ಕನ್ನಡಕ್ಕೆ ಅನುವಾದ ಮತ್ತು ವಿಷಯ ಸೇರ್ಪಡೆ- kuktalkies ಗೋಸ್ಕರ ರಜನಿ ರಾಜು.