ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು
“ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ ಎಲ್ಲರಿಗೂ ದೊರೆಯುವಂತಾಗಬೇಕು” ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಕನ್ನಡ ನಾಡಿನ ಮತ್ತು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡಿದ ಪ್ರಖ್ಯಾತ ಮೈಸೂರು ಸಂಸ್ಥಾನದ ೨೪ನೇಯ ರಾಜನಾಗಿ ಸಿಂಹಾಸನವನ್ನು ಅಲಂಕರಿಸಿದ್ದ “ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್” ಅವರ ಜನ್ಮದಿನಾಚರಣೆ ಪ್ರಯುಕ್ತ ಅನಿವಾಸಿ ಕನ್ನಡಿಗರ ಪರವಾಗಿ ಶತ ಶತ ನಮನಗಳು.
ಛಾಯಾಚಿತ್ರ ಕೃಪೆ : ವಿಕಿಪೀಡಿಯ/ಅಂತರ್ ಜಾಲ.