ಕಣ್ಣಲ್ಲಿ ಕಣ್ಣಿಟ್ಟು ಕಾಯೋ…
ಕಣ್ಣ ಮುಚ್ಚಿದರೆ ಸಾಕು ಕನಸಲ್ಲಿ ಹಾಯೋ…
ಕಣ್ತಪ್ಪಿ ಬೀಳಲು ಅಂದಳವಳು ಅಯ್ಯೊ…
ಕೈ ಹಿಡಿದು ಎದ್ದೆಳಿಸಿದ ಭಾರತಾಂಬೆಯ-
ಮಗಳು ಕಣಯ್ಯೋ…
ಹಿಂದಿ ಉರ್ದು ತೆಲುಗು ಮರಾಠಿ
ಕಲ್ಯಾಣ ಕರ್ನಾಟಕದ ಹೂದೋಟದಲ್ಲಿ
ನನ್ನ ಅಕ್ಕ ಪಕ್ಕದ ಮನೆಯಂಗಳದಲ್ಲಿ
ಒಂದಾಗಿ ಇಂದಿಗೂ ಅರಳುವ ಹೂವುಗಳು…
ತುಳು ತಮಿಳು ಮಲಿಯಾಳಿ, ಜೊತೆಗೂಡಿ-
ನಾ ಆಡಿ ಒಡನಾಡಿ ನಲಿದು ಒಲಿದ ಮನಂಗಳು…
ಕನ್ನಡಿಗರೂ, ಕನ್ನಡ ನುಡಿ, ಅಂದ್ರೆನೆ ಹಂಗೆ…
ಬೆಲ್ಲಕ್ಕೆ ಮುತ್ತಿಕ್ಕುವ ಇರುವೆಯ ಹಂಗೆ
ಶಿಸ್ತಿನ ಸಿಪಾಯಿಗಳ ಸಾಲುಗಳು ಇದ್ದಂಗೆ…
ಕಣ್ಣಿಗೆ ಬೀಳಲು ಮೂಗನೂ ಕರೆದು
ಮಾತಾಡುವ ಹಂಗೆ, ಕಿವಿಗೆ ಬೀಳಲೂ…
ಕಾಲಿಲ್ಲದ ಕುಂಟ ನೂ ಎದ್ದು ಕುಣಿದು
ನಲಿದಾಡುವಂಗೆ…
ಕನ್ನಡ ಅಂದ್ರೆ ನಂಗೆ…
ಕನಸಲ್ಲೂ ಕಣ್ಣು ಮುಂದೆ ಬರುವ
ನನ್ನಮ್ಮ ಇದ್ದಂಗೆ, ಕನ್ನಡದ ನುಡಿಗಳು
ಕಿವಿಗೆ ಬೀಳುತ್ತಿದ್ದರೆ, ಅವಳೆ ಬಂದು
ಜೋಗುಳ ಹಾಡಿದಂಗೆ…
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೨೭-ನವಂಬರ್-೨೦೨೧
Great content! Keep up the good work!