ಇದೇ ದಿನಾಂಕ ೨೦ ಜೂನ್, ಭಾನುವಾರದಂದು ಕನ್ನಡಿಗರುಯುಕೆ ಹಾಗೂ ಚಿರಂತನ ದಾವಣಗೆರೆ ಜೊತೆಗೂಡಿ ಅಂತಾರಾಷ್ಟ್ರೀಯ ಯೊಗ ದಿನಾಚರಣೆಯ ಪ್ರಯುಕ್ತ ಡಾ. ಭಾಗೀರಥಿ ಕನ್ನಡತಿ ಅವರಿಂದ ವಿಶೇಷ ಯೊಗ ಶಿಬಿರವನ್ನು ವರ್ಚುಯಲ್ ಜೂಮ್ ಮುಖಾಂತರ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಕಿಂಗ್ಡಮ್ ಹಾಗೂ ಕರ್ನಾಟಕದಿಂದ ಸುಮಾರು ೨೦೦ ಯೊಗ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಶ್ರೀ ಜೆರೆಮಿ ಬೆಡ್ಫೋರ್ಡ್, ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಬೆಂಗಳೂರು ಅವರು ಕನ್ನಡಿಗರನ್ನುದ್ದೇಶಿಸಿ ಮಾತನಾಡಲಿದ್ದಾರೆ ಜೊತೆಗೆ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ಶ್ರೀ ವಿಪುಲ್ ಕುಮಾರ್ ಅವರು ಮಾತನಾಡಲಿದ್ದಾರೆ.