“ಆಡಿ ಪಾಡಿ ಕುಣಿದಾಡಿ ಭಜನೆ ಮಾಡಿ, ಬೇಡಿದ ವರ ಕೊಡುವ…!!”
“ಓಂ ಶ್ರೀ ರಾಘವೇಂದ್ರರಾಯ ನಮಃ” ಇದರಿಲ್ಲಿರುವ ಪ್ರತಿಯೊಂದು ಅಕ್ಷರಗಳಲ್ಲಿ ಅದೆಂತಹ ಅಸದೃಶ ಶಕ್ತಿ ಅಡಗಿರಬಹುದು ಎಂದು ನೀವೆ ಊಹಿಸಿ. ಕೇವಲ ರಾಘವೇಂದ್ರರ ಹೆಸರನ್ನು ಕೇಳಿ ಸಾವಿರಾರು ಜನ ವಿದೇಶಗಳಲ್ಲಿಯೆ ಸೆರುವರೆಂದರೆ ಇನ್ನೂ ಅವರು ನಡೆದಾಡಿ ತಪಸ್ಸನ್ನಾಚರಿಸಿ ಶತಶತಮಾನಗಳಿಂದಲೂ ನೆಲೆ ನಿಂತು ಭಕ್ತರನ್ನು ಹರಸಿ ಉದ್ಧರಿಸುತ್ತಿರುವ ತಪೋಭೂಮಿ ಮಂತ್ರಾಲಯದಲ್ಲಿನ ವೈಭವ ಅದ್ಹೆಗಿದ್ದಿರಭಹುದು? ಹೇಳಲಸಾದ್ಯ, ದಾಸಶ್ರೇಷ್ಠರು ಹಾಡಿ ಹೊಗಳಿದಂತೆ “ಮಂದೆ ಭಾಗ್ಯರಿಗೆ ದೊರೆಯದಿವರ ಸೇವಾ, ಶರಣರ ಸಂಜೀವ” ಅದು ಪುಣ್ಯವಂತರಿಗೆ ಮಾತ್ರ ದೊರೆಯಬಹುದಾದ ಭಾಗ್ಯವೆಂದರೆ ಅತಿಶಯೋಕ್ತಿಯೇನಲ್ಲ.
ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗದವನಾಗಿರುವುದರಿಂದ ಮಂತ್ರಾಲಯ ಮಠದ ಸಂಪರ್ಕ ಚಿಕ್ಕವಯಸ್ಸಿನಿಂದಲೂ ಇರುವುದರಿಂದ ಅದಕ್ಕಿಂತಲೂ ಹೆಚ್ಚಾಗಿ ಗುರು ರಾಘವೇಂದ್ರರ ಕೃಪೆಗೆ ಹಲವಾರು ಬಾರಿ ಅನಿರಿಕ್ಷಿತವಾಗಿ ಪಾತ್ರನಾಗಿರುವುದರಿಂದ, ಹತ್ತಾರು ಸಮಸ್ಯೆಗಳನ್ನು ಅವರು ನಾಮಸ್ಮರಣೆ ಬಲದಿಂದಲೆ ಪರಿಹಾರಗಳನ್ನು ಕಂಡುಕೊಂಡಿದ್ದರಿಂದ ವಿಶ್ವದ ಯಾವ ಮೂಲೆಯಲ್ಲಿಯೆ ಇರಲಿ ಗುರುಗಳ ಅಲ್ಪ ಸೇವೆಯನ್ನು ಮಾಡುವ ಅವಕಾಶ ಇದೆಯಂದರೆ ತಪ್ಪಿಸಿಕೊಳ್ಳುವ ಮಾತೆ ಇಲ್ಲಾ ಅಂತಹುದರಲ್ಲಿ ಆರಾಧನೆ ಮಹೋತ್ಸವ ಇನ್ನೂ ಕೇಳಬೇಕೆ? ಕಳೆದೆರಡು ವರ್ಷ ಮಹಾ ಮಾರಿಯಿಂದಾಗಿ ಮನಹ್ತೃಪ್ತಿಯಾಗಿ ಸೇವೆ ಸಲ್ಲಿಸುವ ಅವಕಾದಿಂದ ವಚಿತರಾಗಿದ್ದರಿಂದ ಕೆಲಸಕ್ಕೆ ರಜೆಯನ್ನು ಹಾಕಿ ಈ ಬಾರಿ ಮಡದಿ ನೇಹಾ ಮತ್ತು ಮಕ್ಕಳೊಂದಿಗೆ ಸಾಧ್ಯವಾದಷ್ಟು ಮಟ್ಟಿಗೆ ಸೇವೆಯನ್ನು ಮಾಡುವ ಆಸೆಯೊಂದಿಗೆ ಆರಾಧನೆಯ ದಿನ ಬರುವುದನ್ನು ಎದಿರು ನೋಡುತ್ತಿದ್ದೆವು. ಆದರೆ ಆ ಮೂರು ( ಅಗಸ್ಟ್ ೧೨,೧೩ ಮತ್ತು ೧೪) ದಿನಗಳು ಕ್ಷಣಗಳಂತೆ ಕಳೆದು ಹೋಗಿದ್ದು ಮತ್ತು ಆ ಕ್ಷಣಗಳ ನೆನಪುಗಳು ಮಾತ್ರ ಅವಿಸ್ಮರಣೀಯ.
ಅಗಸ್ಟ್ ೧೨ನೇ ತಾರಿಖಿನಂದು ಗುರು ಸಾರ್ವಭೌಮರ ೩೫೧ನೇಯ ಆರಾಧನ ಮಹೋತ್ಸವದ ಅಂಗವಾಗಿ, ಪ್ರಸ್ತೂತ ಪೀಠಾಧಿಪತಿಗಳಾದ ೧೦೦೮ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಪ್ಪಣೆಯ ಮೆರೆಗೆ ಧಾನ್ಯ ಪೂಜೆಯನ್ನು ಮಾಡುವುದರರೊಂದಿಗೆ ವಿಧ್ಯುಕ್ತವಾಗಿ “ಶ್ರೀ ರಾಘವೇಂದ್ರ ಸ್ವಾಮಿ ಮಠ, ಸೀವರ್ ಹೌಸ್, ವೈಟ್ ಹಾರ್ಟ್ ರೋಡ್, ಸ್ಲೋ (Slough) – SL1 2SF” ನಲ್ಲಿ ಆರಾಧನೆ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.ಪೂಜಾಪದ್ದತಿಯನುಸಾರ ಮಂತ್ರೋಕ್ತಿಗಳೊಂದಿಗೆ ನಿರ್ಮಾಲ್ಯವನ್ನು ಮಾಡಿ ವಿಜ್ರಂಭಣೆಯಿಂದ ಶ್ರೀ ಲಕ್ಷ್ಮೀ ಸಹಿತ ನರಸಿಂಹ, ಶ್ರೀದೇವಿ ಭೂದೇವಿ, ಸಹಿತ ಶ್ರೀನಿವಾಸ ದೇವರ ವಿಗ್ರಹಗಳೊಂದಿಗೆ ಯತಿಕುಲೋತ್ತಮರಾದ ಗುರು ರಾಘವೇಂದ್ರರ ಮೃತ್ತಿಕೆಯ ಬೃಂದಾವನಕ್ಕೆ ಶ್ರೀ ಅಪ್ಪಣಾಚಾರ್ಯ ಕೃತ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಸ್ತೋತ್ರವನ್ನು ಸ್ತುತಿಸುವುದರೊಂದಿಗೆ ವಿಜ್ರಂಭಣೆಯಿಂದ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ಭಕ್ತಾದಿಗಳು ದೇವರನಾಮಗಳನ್ನು ಹಾಡುವುದರೊಂದಿಗೆ ಪಲ್ಲಕ್ಕಿ ಸೇವೆಯನ್ನು ಮಾಡಿ ಮಹಾ ಮಂಗಳಾರತಿಯನ್ನು ನೆರವೆರಿಸಿ ಗುರುರಾಯರಲ್ಲಿ ಆಯುರಾರೋಗ್ಯ, ಧನ ಧಾನ್ಯ ಕೀರ್ತಿ ಸಂಪತ್ತುನ್ನು ಸಕಲ ಭಕ್ತಾದಿಗಳಿಗೆ ದಯಪಾಲಿಸುವಂತೆ ಕೋರಿ ತೀರ್ಥ ಪ್ರಸಾಧವನ್ನು ವಿತರಿಸಲಾಯಿತು. ಸಾಯಂಕಾಲ ಸಂಗೀತ ಕಾರ್ಯಕ್ರಮ, ಭಜನೆ, ಮಹಾಮಂಗಳಾರತಿ ಮತ್ತು ಮಂತ್ರ ಪುಷ್ಪಗಳನ್ನು ಪಠಿಸಿ ಉಯ್ಯಾಲೆ ಸೇವೆಯನ್ನು ನೆರವೆರಿಸುವುದರೊಂದಿಗೆ ಪೊರ್ವಾರಾಧನೆಯನ್ನು ಸಂಪನ್ನಗೂಳಿಸಲಾಯಿತು.
ಅಗಸ್ಟ್ ೧೩ನೇಯ ತಾರಿಖಿನಂದು ಮಧ್ಯಾರಾಧನೆಯ ಪ್ರಯುಕ್ತ ಸೇರಿದ್ದು ನೂರಾರು ಭಕ್ತರು ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಪಂಚಾಮೃತ ಅಭಿಷೇಕ, ಪಲ್ಲಕ್ಕಿಯಲ್ಲಿ ಪ್ರಹ್ಲಲಾದರಾಯರ ಉತ್ಸವ ಮೂರ್ತಿಯನ್ನಿಟ್ಟು ಭಕ್ತಗಣ ಸಮೂಹದೊಂದಿಗೆ ಆಡಿ, ಪಾಡಿ ಕುಣಿದಾಡಿ ಭಜನೆಯನ್ನು ಮಾಡಿ, ಪ್ರಾಕಾರದಲ್ಲಿ ಪ್ರದಕ್ಷಿಣೆಯನ್ನು ಹಾಕುವುದರೊಂದಿಗೆ ಸಂಭ್ರಮಿಸಿ ಮಹಾ ಮಂಗಳಾರತಿ, ಮಂತ್ರ ಪುಷ್ಪಗಳನ್ನು ಭಕ್ತಾದಿಗಳಿಗಳೊಂದಿಗೆ ಸೇರಿ ಪಠಿಸುವುದರೊಂದಿಗೆ ವೃಂದಾವನಾಂತರ್ಗತ ಗುರು ರಾಯರನ್ನು ಪ್ರಾರ್ಥಿಸಿ ತೀರ್ಥ ಪ್ರಸಾದವನ್ನು ವಿತರಿಸಲಾಯಿತು. ಸಾಯಂಕಾಲ ಸಂಗೀತ ಕಾರ್ಯಕ್ರಮ, ಭಜನೆ, ಮಹಾಮಂಗಳಾರತಿ ಮತ್ತು ಮಂತ್ರ ಪುಷ್ಪಗಳನ್ನು ಪಠಿಸಿ ಉಯ್ಯಾಲೆ ಸೇವೆಯನ್ನು ನೆರವೆರಿಸುವುದರೊಂದಿಗೆ ಮಧ್ಯಾರಾಧನೆಯನ್ನು ಸಕಲ ವಿಧಿ ವಿಧಾನಗಳೊಂದಿಗೆ GB SRS BRUNDAVAN, SRS MUTT Slough ಮಠದಲ್ಲಿ ಆಚರಿಸಿ ಸಂಪನ್ನಗೂಳಿಸಲಾಯಿತು.
ಅಗಸ್ಟ್ ೧೪ ರಂದು ಉತ್ತರರಾಧನೆಯ ನಿಮಿತ್ಯ ಹಾಗೂ ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದುದ್ದರಿಂದ, ವಿಶಾಲವಾದ ಸಭಾಂಗಣದಲ್ಲಿ ಗುರು ರಾಯರ ಅನುಸಂಧಾನದ ಮೂಲಕ ಆಚರಿಸುವ ಏರ್ಪಾಡು ಮಾಡಲಾಗಿತ್ತು. ಸುಮಾರು ೫೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತಗಣದೊಂದಿಗೆ ಶ್ರೀ ಸೀತಾ, ಲಕ್ಷ್ಮಣ, ಹನುಮಂತ ಸಹಿತ ಶ್ರೀ ರಾಮಚಂದ್ರ ದೇವರ ವಿಗ್ರಹಗಳೊಂದಿಗೆ ಯತಿಕುಲೋತ್ತಮರಾದ ಗುರು ರಾಘವೇಂದ್ರರ ಪಂಚಲೋಹದ ವೃಂದಾವನದ ಪ್ರತಿಕೃತಿಗೆ ಅನುಸಂಧಾನದ ಮೂಲಕ ಹಾಲು ಮೊಸರು ಜೇನುತುಪ್ಪ ಸಕ್ಕರೆ ಮತ್ತು ವಿವಿಧ ಹತ್ತುಹಲವು ಫಲಗಳಿಂದ ಅಭೀಷಕವನ್ನು ಗುರು ರಾಘವೇಂದ್ರರ ಅಷ್ಟೋತ್ತರವನ್ನು ೧೦೮ ಬಾರಿ ಪಠಿಸುವುದರ ಮೂಲಕ ವಿಜ್ರಂಭಣೆಯಿಂದ ನೆರವೆರಿಸಲಾಯಿತು. ನೆರೆದಿದ್ದ ಭಕ್ತರು ದೇವರ ನಾಮಗಳನ್ನು ಹಾಡುವುದರ ಮೂಲಕ ಆರಾಧನೆ ಮಹೋತ್ಸವಕ್ಕೆ ಹೆಚ್ಚಿನ ರಂಗು ಸೆರಿಸಿದರು. ಸಮಯಕ್ಕೆ ಸರಿಯಾಗಿ ಮಹಾಮಂಗಳಾರತಿಯನ್ನು ನೆರವೆರಿಸಿ, ಮೂರು ದಿನಗಳ ಆರಾಧನೆ ನಿಮಿತ್ಯ ಸೇವೆ ಸಲ್ಲಿಸಿದ ಸ್ವಯಂಸೇವಕರೆಲ್ಲರಿಗೂ ಮಂತ್ರಾಲಯ ಪ್ರಭುಗಳ ಮತ್ತು ಶ್ರೀಪಾದಂಗಳವರಿಂದ ಅನುಗೃಹಿತ ಶೇಷವಸ್ತ್ರಗಳಿದ ಪುರಸ್ಕರಿಸಿ ಸನ್ಮಾನಿಸಲಾಯಿತು. ಭಕ್ತಾದಿಗಳೆಲ್ಲರಿಗೂ ಮಂತ್ರಾಲಯದಿಂದ ವಿಶೇಷವಾಗಿ ಕಳುಹಿಸಿ ಕೊಟ್ಟಂತಹ ಪರಿಮಳ ಪ್ರಸಾದವನ್ನು ತೀರ್ಥ ಫಲ ಪುಷ್ಪ ಮಂತ್ರಾಕ್ಷತಿಗಳೊಂದಿಗೆ ವಿತರಿಸಲಾಯಿತು. ಸಕಲ ಭಕ್ತಾದಿಗಳಿಗೂ ಅಚ್ಚುಕಟ್ಟಾಗಿ ತಯಾರಿಸಿದ್ದ ಭೂರಿ ಭೋಜನವನ್ನು ವಿತರಿಸಿ ಸಂತುಷ್ಟಿಗೊಳಿಸಲಾಯಿತು. ಸಾಯಂಕಾಲ ವಿದ್ವಾನ್ ಶ್ರೀ ಬಾಲು ರಘುರಾಮನ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಾಡು ಮಾಡಲಾಗಿತ್ತು. ಆರಾಧನೆಯಲ್ಲಿ ಪಾಲ್ಗೊಂಡು ತನು ಮನೆ ಧನದ ರೂಪದಲ್ಲಿ ಸೇವೆಯನ್ನು ಸಲ್ಲಿಸಿದ ಪ್ರತಿಯೊಬ್ಬರಿಗು ಮಂತ್ರಾಲಯ ನಿವಾಸನಾದ ಶ್ರೀ ರಾಘವೇಂದ್ರರು ಗುರುಸಾರ್ವಭೌಮರು ಆಯುರಾರೋಗ್ಯ, ಐಶ್ವರ್ಯ,ಧನ ಧಾನ್ಯ, ಕೀರ್ತಿ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಶ್ರೀ ಮಠದ ಆಡಳಿತ ಮಂಡಳಿ ಮತ್ತು ಪದಾದಿಕಾರಿಗಳು ಪ್ರಾರ್ಥಿಸುವುದರೊಂದಿಗೆ ಭವ್ಯವಾಗಿ “ಶ್ರೀ ರಾಘವೇಂದ್ರ ಸ್ವಾಮಿ ಮಠ, ಸೀವರ್ ಹೌಸ್, ವೈಟ್ ಹಾರ್ಟ್ ರೋಡ್, ಸ್ಲೋ (Slough) – SL1 2SF” ನಲ್ಲಿ ನಡೆದ ಮೂರು ದಿನಗಳ ೩೫೧ನೇ ಆರಾಧನಾ ಮಹೋತ್ಸವಕ್ಕೆ ಮುಕ್ತಾಯವನ್ನು ಹಾಡಲಾಯಿತು.