೧.
ರಾಜಕೀಯದ ಆಗಸದಲ್ಲಿ ಹಕ್ಕಿಯಂತೆ
ಹಾರಾಡುವ ಆಸೆ ಇದಯೆ…?
ಹಾಗಿದ್ದರೆ ಬಲೆ ಬೀಸಿ ಕುಳಿತುಕೊಳ್ಳುವ
ಬೇಟೆಗಾರರ ಕೈಯಿಂದ
ತಪ್ಪಿಸಿಕೊಳ್ಳಲು ಅರಿಯುವುದು ಒಂದು
ಬಹುಮುಖ್ಯ ಕಲೆಯೆ…!!
೨.
ಅಂದು ಅಪ್ಪ ಕೊಡುತ್ತಿದ್ದ
ಆಶ್ವಾಸನೆ…
ಗರಿಬ್ ಕಲ್ಯಾಣ ಯೋಜನೆಯ
ಹಾಗೆ ಕಾಣುತ್ತಿತ್ತು…
ಇಂದು ಅಪ್ಪನಾಗಿ ಕೊಡುತ್ತಿರುವ
ಆಶ್ವಾಸನೆ ಕಾಂಗ್ರೆಸ್…
ಬಡತನ ಓಡಿಸಲು ಮಾಡಿದ
ಉಪಾಯದಂತೆ ಭಾಸವಾಯಿತು…
೩.
ನಂಬಿಕೆ ಎಂದರೆ ಏನೂ ? ಎಂದು
ಕೇಳುವ ಕಾಲ ಬರುತ್ತಿದೆ…!!
ಏಕೆಂದರೆ ಎಲ್ಲದರಲ್ಲೂ (ಮನೆ ಮನೆಯಲ್ಲೂ
ಮನೆ ಮನದಲ್ಲು) ರಾಜಕೀಯ ಮೂಗು
ತೂರೀಸುತ್ತಿದೆ…ನಾಯಕರ
ಕೈಯ್ಯೂ ಅದಕ್ಕಿಂತ ಹೆಚ್ಚು ತುರಿಸುತ್ತಿದೆ…!!
೪.
ಸುಮ್ಮನೆ ಕೇಳಿಸಿಕೊಂಡೆ
ನನ್ನದೇನೂ ತಪ್ಪಿಲ್ಲ ಎಂದು ತಪ್ಪಿಸಿಕೊಳ್ಳಲು
ನೋಡುತ್ತಿರುವ ಒಬ್ಬ “ಮಹಾನುಭಾವ”…!!
ತಪ್ಪು ಮಾಡಿದ್ದನ್ನು ಆಡಿ ಕಿವಿಯಲ್ಲಿ
ಕೊಂಡಾಡಿ ಈ “ಸಲೀ” ಮಾ (ಡಿ ಆ)ಯಿತು
ಅವರನ್ನು “ದೇವಾನು ದೇವ”…
ಮತ್ತೆ…!! ಪಿಸುಗುಟ್ಟಿ ತಪ್ಪಿಸಿಕೊಳ್ಳಲು
ಆದೀತೆ ಅವರು ಕೈಯಿಂದ ಕಲಿಯುಗದ
ಹುಲುಮಾನವ…??
೬.
ಸತ್ಯವನ್ನು ಕಿವಿಯಲ್ಲಿ ಪಿಸುಗುಟ್ಟಿ
ಜಗತ್ತಿಗೆ ಕೇಳಿಸಿದರು ಅದು
ಅಧಿಕೃತವಲ್ಲ ಎಂದು ಹೇಳಿ ಕಿವಿಗೆ
ಹೂ ಮುಡಿಸಲು ಬರುವರಲ್ಲಾ…!!
ಇಂತಹವರನ್ನೂ ನಮ್ಮ
ನಾಯಕರೆಂದು ಪರಿಗಣಿಸು ಪರಿಸ್ಥಿತಿ
ತಂದುಕೊಂಡುಬಿಟ್ಟೆವಲ್ಲಾ…!!
– ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೧೬-ಅಕ್ಟೋಬರ್-೨೦೨೧