ಚುಕು-ಬುಕು – ೨

ಮನದ ಮಾತು

೧.
ದೇವರು ತಾನು
ಸ್ವತಂತ್ರದಿಂದ ಸ್ವಚ್ಛಂದವಾಗಿರಲು
ಈ ಪ್ರಪಂಚವನ್ನು ಸೃಷ್ಟಿಸಿದ…!!
ಆದರೆ ಮಾನವ
ಅವನಿಗೆ ಗುಡಿಯೊಂದನ್ನು ಕಟ್ಟಿ
ಅದರೊಳಗಿಟ್ಟು ಬಂಧಿಸಲೆತ್ನಿಸಿದ…!!

೨.
ಭಗವಂತ ಇದ್ದಾನೆ ಆದರು
ನಾನೆಂದು ಪ್ರತ್ಯಕ್ಷವಾಗಿ ಕಂಡಿಲ್ಲ…
ಮನುಷ್ಯರನ್ನು ಕಂಡಿದ್ದೆನೆ ಆದರೆ
ಭಗವಂತನಾಗಲು ಹೋಗಿ
ಬಡಿಸಿಕೊಳ್ಳುವ ಕೆಲಸ ಅವರಿನ್ನೂ
ಬಿಟ್ಟಿಲ್ಲಾ…!!

೩.
ತನ್ನ ಕೈಯಲ್ಲಿ ಏನೂ ಇಲ್ಲ
ಆದರು ತನ್ನಿಂದಲೆ ಎಂದು ಪ್ರದರ್ಶಿಸು-
ವುದನ್ನು ಇವರು ಬಿಡುವುದಿಲ್ಲ…
ಎಲ್ಲವು ತನ್ನ ಕೈಯಲ್ಲಿದ್ದರು
ಆ ದೇವರು ಎಂದು ಇವರು ಮುಂದೆ
ಪ್ರತ್ಯಕ್ಷನಾಗುವುದಿಲ್ಲ…!!

೪.
ಬಯಸದೆ ಬರುವುದು
ಎಂದರೆ ಅದು ಸಾವು…ಬಂದರೆ
ಅದು ಓಡಿ ಹೋಗುವಂತೆ
ಬಾಳಿ ತೋರಿಸಬೇಕು ನಾವು…!!

೫.
ಬದುಕು ಸಿಕ್ಕರಷ್ಟೆ ಸಾಲದು
ಅದನ್ನು ಅನುಭವಿಸಿ ದಕ್ಕಿಸಿಕೊಳ್ಳಬೇಕು…
ಪ್ರೀತಿ ಹುಟ್ಟಿದರಷ್ಟೆ ಸಾಲದು
ಪರಾಮರ್ಶಿಸಿ ಪುರಸ್ಕರಿಸುವುದನ್ನು
ಕಲಿಯಬೇಕು.‌‌..!!

೬.
ಗಾಂಧಿಜೀಯವರಲ್ಲಿ ನಮಗೆ
ಕಾಣಿಸುವುದು
ದಾರಿ ಮತ್ತು ಮಾದರಿಯಾದರೆ…
ಶಾಸ್ತ್ರಿಜೀಯವರಲ್ಲಿ ನಮಗೆ
ಕಾಣಸಿಗುವುದು
ರಹದಾರಿ ಮತ್ತು ಜವಾಬ್ದಾರಿ…!!

೭.
ಇಬ್ಬರು ಹುಟ್ಟಿದ್ದು ಅಂದೆ
ನಡೆದು ಬಂದಿದ್ದು ಹಿಂದೆ ಮುಂದೆ…
ಒಬ್ಬರು ತಮ್ಮ ಹಿಂದೆ ದೇಶವೆ
ನಡೆದು ಬರುವಂತೆ ಮಾಡಿದರು…
ಇನ್ನೊಬ್ಬರು ಸಂಕಷ್ಟದಲ್ಲೂ
ಸದೃಢವಾಗಿ ದೇಶವನ್ನು ಮುನ್ನಡಿಸಿ
ತೋರಿಸಿದರು…!!

-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್ ಕಿಂಗ್ಡಮ್
೦೯-ಅಕ್ಟೋಬರ್-೨೦೨೧

1 thought on “ಚುಕು-ಬುಕು – ೨

  1. ಎರಡನೇ ಪಾರಾಗ್ರಾಫ್ ಅರ್ಥಗರ್ಭಿತವಾಗಿ. ಬಹಳ chintanasheelavaagi ಬರೆಯುತ್ತಿರಿ. ಓದಲು ಕುಷಿಯಾಗುತ್ತದೆ.

Leave a Reply

Your email address will not be published. Required fields are marked *