ಆಯ ವ್ಯೇಯಗಳ ಬಗ್ಗೆ
ಚಿಂತಿಸುತ್ತ ಜೀವನದ ಆಯಾಮವನ್ನೆ
ಮರೆತು ಮುನ್ನಡೆಯುತ್ತಿದ್ದೆ…
ನಿಯಮಗಳನ್ನೂ ಮೀರಿ
ನಿರ್ಬಂಧಗಳನ್ನು ಗಾಳಿಗೆ ತೂರಿ
ನಿರವತೆಯಡೆಗೆ ಸಣ್ಣಗೆ ನಡೆದು
ಮುನ್ನುಗುತ್ತಿದ್ದೆ…
ಅಂತರಾತ್ಮ ಚೀರಿ ಹೆಳಿತು
ಯಾಕೋ ಈ ನಿನ್ನ ಅಪೇಕ್ಷೆಯ ಬೊಜ್ಜು
ತುಸು ಹೆಚ್ಚಾಗಿಯೆ ಹೋಯಿತು
ಕರಗಿಸಲಸಾಧ್ಯವೆ ಎಂದು ಒಮ್ಮೆ ಕೇಳಿತು…?
ಉಸಿರು ತಾರಕಕ್ಕೆರಿತು, ಮನಸ್ಸು
ಹಿನ್ನೋಟದಲ್ಲಿ ಇಳಿದು ಈಜಾಡ ಹತ್ತಿತು…
ಸ್ನೇಹ ಸಂಬಂಧಗಳೆಲ್ಲ ಕಣ್ಣಮುಂದೆ
ತೇಲಿ ಬರಲಾರಂಭಿಸಿತು…
ಆಗಸದಲ್ಲಿ ಕಾರ್ಮೋಡಗಳ
ಕತ್ತಲೆ ಆವರಿಸ ಹತ್ತಿತು…
ಕಾಲುಗಳು ಮನೆಕಡೆಯತ್ತ ಹೊರಳಿ
ನಡಿಗೆ ಜೋರಾಯಿತು…
ಕಣ್ಣೀರ ಹನಿಗಳು ಜೊತೆಯಲ್ಲಿ ಸೇರಿ
ಧರೆಗೆ ಉರುಳಲಾರಂಭಿಸಿತು…
ಮಳೆಹನಿಗಳು ಮೋಡಗಳಿಂದ ಚದುರಿ
ಇಳೆಯನ್ನು ಸೇರಿ ಸಂತೈಯಿಸಿದಂತೆ ಭಾಸವಾಯಿತು…
-ಗೋವರ್ಧನ ಗಿರಿ ಜೋಷಿ
ಲಂಡನ್, ಯುನೈಟೆಡ್
ಸೆಪ್ಟಂಬರ್ ೧೯, ೨೦೨೧