ಸಮ್ಮರ್ ಸೋಲ್ಸ್ಟಿಸ್/ಜೂನ್ ಸೋಲ್ಸ್ಟಿಸ್ – ಜೂನ್ ೨೧ ೨೦೨೧

Uncategorized

ಪ್ರತಿ ವರುಷ ಜೂನ್ ತಿಂಗಳ ೨೦-೨೧ ನೇ ತಾರೀಖುಗಳು ಸಮ್ಮರ್ ಸೋಲ್ಸ್ಟಿಸ್ ಅಥವಾ ಜೂನ್ ಸೋಲ್ಸ್ಟಿಸ್ ಎಂದು ಪ್ರಸಿದ್ಧಿ ಪಡೆದಿವೆ.
ಏನಿದು ಸಮ್ಮರ್ ಸೋಲ್ಸ್ಟಿಸ್ ?
ಸೋಲ್ಸ್ಟಿಸ್ ಎನ್ನುವುದು ಲ್ಯಾಟಿನ್ ಭಾಷೆಯ ಪದ. ಇದರ ಅರ್ಥ ಸ್ಥಿರವಾಗಿ ನಿಂತಿರುವ ಸೂರ್ಯನು ಎಂದು. ನಮ್ಮ ಭೂಮಿಯ ಉತ್ತರಾರ್ಧಗೋಳದಲ್ಲಿ ನೆಲೆಸಿರುವ ಪ್ರದೇಶಗಳು ಜೂನ್ ತಿಂಗಳ ೨೦ ಅಥವಾ ೨೧ ನೇ ತಾರೀಖಿನಂದು ವರುಷದ ದೀರ್ಘ ದಿನ ಹಾಗು ಸಣ್ಣ ರಾತ್ರಿಗಳನ್ನು ಕಾಣುತ್ತವೆ. ದಿನದ ಹೊತ್ತಿನಲ್ಲಿ ಸೂರ್ಯನು ಅಲುಗಾಡದೆ ಒಂದೇ ಕಡೆ ನಿಂತುಬಿಟ್ಟಿದ್ದಾನೇನೋ ಎಂಬಂತೆ ಭಾವನೆ ಬರುತ್ತದೆ. ಹಾಗಾಗಿ ಈ ದಿನದಂದು ಸಮ್ಮರ್ ಸೋಲ್ಸ್ಟಿಸ್ ಎಂದು ಆಚರಿಸುಲಾಗುತ್ತದೆ.

ಉತ್ತರಾರ್ಧಗೋಳದಲ್ಲಿ ಈ ದಿನ ಸಾಮಾನ್ಯವಾಗಿ ಜೂನ್ ೨೦ ರಿಂದ ೨೨ ರ ಮಧ್ಯೆ ನಡೆಯುತ್ತದೆ.
ಅಧಿಕ ವರ್ಷ ಬಂದಲ್ಲಿ ಸೋಲ್ಸ್ಟಿಸ್ ಜೂನ್ ನ ೨೦ ನೇ ತಾರೀಖಿಗೂ ಬರುವುದುಂಟು.
ಈ ದಿನದಂದು ಖಗೋಳ ಶಾಸ್ತ್ರದ ಪ್ರಕಾರ ಉತ್ತರಾರ್ಧಗೋಳದಲ್ಲಿರುವ ದೇಶಗಳಲ್ಲಿ ಅಧಿಕೃತವಾಗಿ ಬೇಸಿಗೆ ಕಾಲ ಶುರುವಾಗುತ್ತದೆ ಮತ್ತು ಜೂನ್ ೨೧ ರಿಂದ ಸೆಪ್ಟೆಂಬರ್ ತಿಂಗಳ ೨೨ ರ ವರೆಗೂ ಬೇಸಿಗೆ ಕಾಲವಿರುತ್ತದೆ.
ಅದೇ ತರಹ ದಕ್ಷಿಣಾರ್ಧಗೋಳದ ದೇಶಗಳಲ್ಲಿ ಈ ದಿನದಂದು ವಿಂಟರ್ ಸೋಲ್ಸ್ಟಿಸ್ ಅಂದರೆ ಖಗೋಳ ಚಳಿಗಾಲ ಶುರುವಾಗುತ್ತದೆ.

ಸೋಲ್ಸ್ಟಿಸ್ ನಡೆಯುವುದು ಸೂರ್ಯನು ಆಕಾಶದಲ್ಲಿ ಉತ್ತರದ ಅತಿ ಹೆಚ್ಚು ಎತ್ತರದ ಸ್ಥಾನಕ್ಕೆ ಹೋದಾಗ. ಇದರ ಕಾರಣ ಭೂಮಿಯ ಉತ್ತರ ಧ್ರುವದ ಓರೇ 23.5. ಡಿಗ್ರಿ ಇದ್ದು ಸೂರ್ಯನ ಅತಿ ಸಮೀಪದಲ್ಲಿರುತ್ತದೆ ಮತ್ತು ಭೂಮಿಗೆ ಅತಿ ಹೆಚ್ಚು ಸೂರ್ಯನ ಕಿರಣಗಳು ಬೀಳುತ್ತವೆ. ಕೆಲವು ದೇಶಗಳಲ್ಲಂತೂ ಮಧ್ಯ ರಾತ್ರಿ ೧೨ ಘಂಟೆಯ ವರೆಗೆ ಸೂರ್ಯನು ಜಗಮಗಿಸುತ್ತಿರುತ್ತಾನೆ. ಅದನ್ನು Midnight Sun ಎಂದು ಕೂಡ ಕರೆಯುತ್ತಾರೆ.
ಇದಾದ ನಂತರ ಸೂರ್ಯನು ತನ್ನ ಪಥವನ್ನು ಬದಲಾಯಿಸಿ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಆರಂಭಿಸುತ್ತಾನೆ. ಇಲ್ಲಿಂದ ದಿನಗಳು ಕೆಲವು ಕ್ಷಣಗಳಂತೆ ಕಡಿಮೆಯಾಗಿ ಚಳಿಗಾಲದ ಹೊತ್ತಿಗೆ ದಿನದಲ್ಲಿನ ಸೂರ್ಯನ ಬೆಳಕು ಕಡಿಮೆಯಾಗುತ್ತ ಬರುತ್ತದೆ.

ಛಾಯಾಚಿತ್ರ ಕೃಪೆ- ಗೂಗಲ್

ಸಮ್ಮರ್ ಸೋಲ್ಸ್ಟಿಸ್ ಪುರಾತನ ಕಾಲದಿಂದಲೂ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ.
ಯು.ಕೆ ಯ ಇಂಗ್ಲೆಂಡ್ ದೇಶದಲ್ಲಿ ಸ್ಟೋನ್ ಹೆಂಜ್ ಎಂಬ ಜಾಗವು ಈ ವಿದ್ಯಮಾನಕ್ಕೆ ಜನಪ್ರಿಯವಾಗಿದೆ. ಸ್ಟೋನ್ ಹೆಂಜ್ ಬರಿ ಕಲ್ಲುಗಳಿಂದ ಕಟ್ಟಿರುವ ಒಂದು ಐತಿಹಾಸಿಕ ಸ್ಮಾರಕ. ಈ ನಿರ್ಮಾಣವನ್ನು ಸೂರ್ಯನ ಬೆಳಕನ್ನು ಹಿಂಬಾಲಿಸುವಂತೆ ಕಟ್ಟಿದ್ದಾರೆ.
ಸಮ್ಮರ್ ಸೋಲ್ಸ್ಟಿಸ್ ನಂದು ಈ ಕಲ್ಲುಗಳ ನಡುವೆ ಒಂದು ವಿಶಿಷ್ಟ ರೀತಿಯಲ್ಲಿ ಸೂರ್ಯನ ಕಿರಣಗಳು ಬಿದ್ದು ಆ ಸುವರ್ಣ ರೇಖೆಗಳು ಒಂದು ಸುಂದರ ದೃಶ್ಯವನ್ನು ಉಂಟುಮಾಡುತ್ತವೆ.

ಸ್ಟೋನ್ ಹೆಂಜ್ ನಲ್ಲಿ ಮೂಡಿರುವ ಭವ್ಯ ಸೂರ್ಯೋದಯ
ಛಾಯಾಚಿತ್ರ ಕೃಪೆ- ಗೂಗಲ್


ಇದನ್ನು ನೋಡಲು ಅನೇಕ ಜನರು ನಾನಾ ಕಡೆಯಿಂದ ಬರುತ್ತಾರೆ, ಹೀಗೆ ಬರುವ ಜನರ ಸಂಖ್ಯೆ ಒಮ್ಮೊಮ್ಮೆ 200,000 ದ ತನಕ ಮುಟ್ಟುತ್ತದೆ. ಹಾಗೆ ಕೆಲವು ಕಡೆ Bonfire ಪಾರ್ಟಿಯನ್ನು ಮಾಡಿ ಆಚರಿಸುಲಾಗುತ್ತದೆ.
ಸೋಲ್ಸ್ಟಿಸ್ ಕಾಲದಲ್ಲಿ Strawberry ಹಣ್ಣಿನ ಬೆಳೆ ಹೆಚ್ಚಾಗಿ ಬೆಳೆದು ಜೂನ್ ತಿಂಗಳ ಪೌರ್ಣಮಿಯನ್ನು Strawberry Moon ಎಂದು ಕೂಡ ಕರೆಯುತ್ತಾರೆ.
ಈ ವರುಷ ಅಂದರೆ ಜೂನ್ ೨೧ ೨೦೨೧ ಸಮ್ಮರ್ ಸೋಲ್ಸ್ಟಿಸ್ ಜೊತೆಗೆ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯೂ ಆಗಿದ್ದು ಈ ದಿನ ವೈಶಿಷ್ಟ್ಯಮಯವಾಗಿದೆ.

Leave a Reply

Your email address will not be published. Required fields are marked *