“ಚುಕು-ಬುಕು”

೧.ಬರೆಯುವವರಿಗೆ ಗೊತ್ತುಬರವಣಿಗೆಯ ಹಿಂದಿರುವ ಬವಣೆ…ಬರದುದ್ದನ್ನು ಓದುಗರು ಮೆಚ್ಚಿದರೆ ಸಾಕುಅದೆ ಹಬ್ಬದಾಚರಣೆ…!! ೨.ಕೆಲವರಿಗೆ ತಮ್ಮ ಸಾಧನೆಯಿಂದಲೆಸುದ್ದಿಯಾಗಬೇಕೆಂಬ ಕಿಚ್ಚು…ಇನ್ನೂ ಕೆಲವರಿಗೆ ಇನ್ನೊಬ್ಬರ ಸಾಧನೆಯಲ್ಲಿ ಅವರು ಕಡ್ಡಿಯಾಡಿಸುತ್ತ ಬೆಚ್ಚಗೆಇರಬಹುದು ಎಂಬ ಹುಚ್ಚು…!! ೩.ಅಡ್ಡದಾರಿ ಹಿಡಿಯುವುದಕ್ಕಿಂತಗಡ್ಡಧಾರಿ ಯಾಗುವುದು ಲೇಸು…ಜನರ ಜೀವನಕ್ಕಿಂತ ಮಿಗಿಲಾಗಿದೆಇಂದು ಗಳಿಸುವುದು ಕಾಸು…!! ೪.ಎಲ್ಲರೂ ಸುದ್ದಿಗಾಗಿ ಕಾಯುವುದೆ ಹೆಚ್ಚು…ಕೆಲವರು ಸುದ್ದಿಯಾಗಿ ಹಚ್ಚುವರು ಕಿಚ್ಚುಹಲವರಿಗೆ ಇಲ್ಲಸಲ್ಲದ್ದನ್ನು ಸುದ್ದಿಯನ್ನಾಗಿಮಾಡುವ ಹುಚ್ಚು… ೫.ಬದುಕೆ ನೀ ಏಕೆ ಓಲಾಡುವೆಅಲೆಗಳ ಮೇಲೆ ತೆಲಾಡುವ ಹಡುಗಿನ ಹಾಗೆಹೊಳೆ ಹೊಳೆಯುತ ಆಗಸದಿಂದಕಳೆಚಿ ಬೀಳುವ ನಕ್ಷತ್ರಗಳಂಗೆ..?? -ಗೋವರ್ಧನ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್೨೫-ಸೆಪ್ಟಂಬರ್-೨೦೨೧

Continue Reading

“ವಾಯು ವಿಹಾರ”

ಆಯ ವ್ಯೇಯಗಳ ಬಗ್ಗೆಚಿಂತಿಸುತ್ತ ಜೀವನದ ಆಯಾಮವನ್ನೆಮರೆತು ಮುನ್ನಡೆಯುತ್ತಿದ್ದೆ… ನಿಯಮಗಳನ್ನೂ ಮೀರಿನಿರ್ಬಂಧಗಳನ್ನು ಗಾಳಿಗೆ ತೂರಿನಿರವತೆಯಡೆಗೆ ಸಣ್ಣಗೆ ನಡೆದುಮುನ್ನುಗುತ್ತಿದ್ದೆ… ಅಂತರಾತ್ಮ ಚೀರಿ ಹೆಳಿತುಯಾಕೋ ಈ ನಿನ್ನ ಅಪೇಕ್ಷೆಯ ಬೊಜ್ಜುತುಸು ಹೆಚ್ಚಾಗಿಯೆ ಹೋಯಿತುಕರಗಿಸಲಸಾಧ್ಯವೆ ಎಂದು ಒಮ್ಮೆ ಕೇಳಿತು…? ಉಸಿರು ತಾರಕಕ್ಕೆರಿತು, ಮನಸ್ಸುಹಿನ್ನೋಟದಲ್ಲಿ ಇಳಿದು ಈಜಾಡ ಹತ್ತಿತು…ಸ್ನೇಹ ಸಂಬಂಧಗಳೆಲ್ಲ ಕಣ್ಣಮುಂದೆತೇಲಿ ಬರಲಾರಂಭಿಸಿತು… ಆಗಸದಲ್ಲಿ ಕಾರ್ಮೋಡಗಳಕತ್ತಲೆ ಆವರಿಸ ಹತ್ತಿತು…ಕಾಲುಗಳು ಮನೆಕಡೆಯತ್ತ ಹೊರಳಿನಡಿಗೆ ಜೋರಾಯಿತು… ಕಣ್ಣೀರ ಹನಿಗಳು ಜೊತೆಯಲ್ಲಿ ಸೇರಿಧರೆಗೆ ಉರುಳಲಾರಂಭಿಸಿತು…ಮಳೆಹನಿಗಳು ಮೋಡಗಳಿಂದ ಚದುರಿಇಳೆಯನ್ನು ಸೇರಿ ಸಂತೈಯಿಸಿದಂತೆ ಭಾಸವಾಯಿತು… -ಗೋವರ್ಧನ ಗಿರಿ ಜೋಷಿಲಂಡನ್, ಯುನೈಟೆಡ್ಸೆಪ್ಟಂಬರ್ ೧೯, […]

Continue Reading

ಕನ್ನಡ ಕಲಿಕೆಯಲ್ಲಿ ಹಾಡು, ನೃತ್ಯ ಹಾಗೂ ಆಂಗಿಕ ಅಭಿನಯದ ಬಳಕೆ…!!

ದೇಶ ವಿದೇಶದಲ್ಲಿ ನೆಲೆಸಿರುವ ಬಹುತೇಕ ಎಲ್ಲಾ ವಯಸ್ಸಿನ ಕನ್ನಡಿಗರಲ್ಲಿ ಈಗ ತಮ್ಮ ಹೊಸ ವಿಧಾನದ ಪ್ರಯೋಗಗಳಿಂದ ಹಾಡು ಅಭಿನಯ, ಕಲೆ, ಸಂಗೀತ, ವರ್ಣಮಾಲೆ, ಕಾಗುಣಿತ ಎಲ್ಲವುಗಳನ್ನು ರಚನಾತ್ಮಕವಾಗಿ ಮತ್ತು ಕಲಾತ್ಮಕವಾಗಿ ಒಗ್ಗೂಡಿಸಿ ಮನೋರಂಜನೆಯ ಜೊತೆಜೊತೆಗೆ ಕನ್ನಡ ಕಲಿಕೆಗೆ ಅನುಕೂಲವಾಗುವಂತಹ ವಿಡಿಯೋಗಳನ್ನು ರೂಪಿಸಿ ಅವುಗಳನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡು ಇಂದು ಎಲ್ಲರಿಗೂ ಚಿರಪರಿಚಿತರಾಗಿ ಮನೆಮಾತಾಗಿರುವ ಭರತನಾಟ್ಯ ಪ್ರವೀಣೆ, ಸುಶ್ರಾವ್ಯ ಕಂಠದೊಂದಿಗೆ ಮನಮೋಹಕ ನಗುವನ್ನು ಸದಾ ಮೊಗದ ಮೇಲೆ ಹೊತ್ತುಬರುವ ಆಂಗಿಕ ಅಭಿನಯದ ಚತುರೆ ಅಪ್ಪಟ ಕನ್ನಡತಿ “ಶ್ರೀಮತಿ ಮಾನಸಿ ಸುಧೀರ್” […]

Continue Reading

ಕವನ

ಕೆಲವೊಮ್ಮೆ ಕರೆದಾಗಥಟ್ಟನೆ ಬಂದುಬಿಡುವವಳು…ಹಲವುಬಾರಿ ಕಾಡಿ ಬೇಡಿದರುಬರಲೊಪ್ಪದವಳು… ಒಮ್ಮೊಮ್ಮೆ ಅಂಕು ಡೊಂಕಿನಹೆಜ್ಜೆಯನಿಟ್ಟು ಬಂದಂತೆ ಮಾಡುವಳು…ಮಗದೊಮ್ಮೆ ಅರ್ಧಕ್ಕೆ ನಿಂತುವೈಯ್ಯಾರದಿ ಬೀಗುವಳು… ಇನ್ನೇನು ಬರುವಳು, ಬಂದಳುಬಂದೆ ಬಿಟ್ಟಳು ಅನ್ನುವಾಗಲೆ ಭ್ರಮೆಯನ್ನುಸೃಷ್ಟಿಸಿ ಆಸೆಯನ್ನು ಹುಟ್ಟಿಸಿ ಅಲ್ಲೆಲ್ಲೊನಿಂತು ಮಿಂಚಿ ಮರೆಯಾಗುವಳು… –ಗೋವರ್ಧನ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್ದಿನಾಂಕ:೦೯-ಸೆಪ್ಟಂಬರ್-೨೦೨೧

Continue Reading

ಯುನೈಟೆಡ್ ಕಿಂಗ್ಡಮ್ ‌‌ನಲ್ಲಿ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆ

ಕೆಲವು ದಿನಗಳ ಹಿಂದೆ ರಾಘವೇಂದ್ರ ಗುರು ಸಾರ್ವಭೌಮರ ಆರಾಧನೆ ಹತ್ತಿರವಾಗುತ್ತಿದ್ದುದ್ದರಿಂದ ಎಲ್ಲಿ ಈ ಬಾರಿ ಸೇವೆಯ ಅವಕಾಶ ದೊರೆಯುತ್ತದೆಯೋ ಇಲ್ಲವೋ ಎನ್ನುವ ಅನುಮಾನಗಳೊಂದಿಗೆ ಮನದ ದುಗುಡನ್ನು ಹಿಂದಿನ ಬರವಣಿಗೆಯಲ್ಲಿ ಹಂಚಿಕೊಂಡಿದ್ದಾರೆ.ಅದಾದ ಒಂದೆರಡು ದಿನಗಳಲ್ಲಿ “ಜಿ ಬಿ ಎಸ್ ಆರ್ ಎಸ್ ಬೃಂದಾವನ (ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ, ಯುಕೆ ಬ್ರಾಂಚ್)” ಮಠದ ವಾಟ್ಸಪ್ ಗ್ರೂಪ್ನಲ್ಲಿ ಈ ಬಾರಿಯ ಆರಾಧನೆಯನ್ನು ಅಗಸ್ಟ್ ೨೩,೨೪ ಮತ್ತು ೨೫ನೇ ತಾರಿಕಿನಂದು (ಪೂರ್ವಾರಾಧನೆ,ಮಧ್ಯಾರಾಧನೆ ಹಾಗೂ ಉತ್ತರ ಆರಾಧನೆಯನ್ನು) ಸರಳವಾಗಿ ಕರೋನಾದ ನಿಬಂಧನೆಗಳನ್ನು […]

Continue Reading

ಯುನೈಟೆಡ್ ಕಿಂಗ್ಡಮ್ ‌ನಲ್ಲಿ ಕಲಿಯುಗದ ಕಾಮಧೇನು…!

ಬಹುತೇಕ ಆಸ್ತಿಕರೆಲ್ಲರು ಒಂದಲ್ಲ ಒಂದು ಬಾರಿಯಾದರು ಕೆಳಿರಬಹುದಾದಂತ ಸಹಜವಾದ ಮಾತು “ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯದ ರಾಘಪ್ಪ” ಅನ್ನುವಷ್ಟರಮಟ್ಟಿಗೆ ಮಂತ್ರಾಲಯದ ಗುರುಸಾರ್ವಬಹುಮರು ದೇಶವಿದೆಶಗಳಲ್ಲಿ ವಾಸಿಸುವ ಬಹುತೇಕ ಆಸ್ತಿಕರಿಗೆ ಚಿರಪರಿಚಿತ. ಎಷ್ಟೊ ಜನ ನಾಸ್ತಿಕರು ಗುರುಗಳ ಆಕಸ್ಮಿಕ ವೃಂದಾವನ ದರ್ಶನ ಮಾತ್ರದಿಂದಲೆ ಅವರ ಕ್ಲೇಶಗಳೆಲ್ಲವು ಕಳೆದುಹೋಗಿ ಅವರ ಪರಮ ಭಕ್ತರಾಗಿದ್ದುಂಟು.ಹೆಳುತ್ತ ಹೋದರೆ ಅವರ ಮಹಿಮೆ, ಪವಾಡಗಳು ಅಪರಂಪಾರ. ಕಲಿಯುಗದ ಕಾಮಧೇನು ಎಂದೆ ಪ್ರಖ್ಯಾತವಾದ ಮಂತ್ರಾಲಯದ ಪ್ರಭುಗಳು ಅವರು ಭಕ್ತರ ಆಶೋತ್ತರಗಳನ್ನು ಈಡೇರಿಸಲು ಯುನೈಟೆಡ್ ಕಿಂಗ್ಡಮ್‌ನಲ್ಲಿಯೂ ಕೂಡ ಬಂದು […]

Continue Reading

ಮಾಯದಂತ ಮಳೆ ಬಂತಣ್ಣ ಮದಗಾನ ಕೆರೆಗೆ…!!

ಈಗ ಭಾರತದಲ್ಲಿ ಮಳೆಗಾಲದ ಸಮಯವಾದರೆ ಇಲ್ಲಿ ಇಂಗ್ಲೆಂಡಿನಲ್ಲಿ ಬೆಸಿಗೆ ಕಾಲ. ಮಳೆಯ ಬರುವಿಕೆಯಿಂದ ಆಹ್ಲಾದಕರವೆಷ್ಟೊ ಅದಕ್ಕಿಂತ ಹೆಚ್ಚು ಅದರಿಂದಾಗುವ ಅವಾಂತರಗಳು ಯಾವಾಗಲು ಜನಸಾಮಾನ್ಯರನ್ನು ಹೈರಾಣ ಮಾಡುವುದೆ ಹೆಚ್ಚು. ಚಿಕ್ಕವನಿದ್ದಾಗ ಹುಟ್ಟಿಬೆಳೆದ ಊರಾದ ದೇವದುರ್ಗ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದುದ್ದರಿಂದ ( ಈಗಲೂ ಅದು ಆ ಸ್ಥಾನವನ್ನು ಕಾಯ್ದಿರಿಸಿಕೊಂಡಿರಬಹುದು ಎಂದು ನನ್ನ ಭಾವನೆ) ಋತುಮಾನ ಯಾವುದಾದರು ಸರಿ ಅಲ್ಲಿ ಸಾಮಾನ್ಯ ಜನರಾದ ನಮ್ಮಂತವರಿಗೆ ಅಡಚಣೆಗಳು ತೊಂದರೆಗಳು ಸರ್ವೆ ಸಾಮಾನ್ಯ. ಬೆಸಿಗೆಯಾದರೆ ನದಿ ಬಾವಿ ಕೆರೆಯಲ್ಲಿ ನಿರಿಲ್ಲದ ಸಮಸ್ಯೆ ಒಂದಡೆಯಾದರೆ […]

Continue Reading

ಸ್ನೇಹ ಅಂದ್ರೆನೆ ಹಾಗೆ…!!

ಸ್ನೇಹ ಅಂದ್ರೆನೆ ಹಾಗೆಬೆಳೆಯೊ ಮರ ನಾವಾದರೆ ಅದಕ್ಕೆಅಪ್ಪಿಕೊಂಡು ಅಂಕು ಡೊಂಕನ್ನುಒಪ್ಪಿಕೊಂಡು ಹರಡೊ ಬಳ್ಳಿ ಇದ್ದಹಾಂಗೆ… ಸ್ನೇಹ ಅಂದ್ರೆನೆ ಹಾಗೆದಿನ ಓದುವ ಪತ್ರಿಕೆಯೆ ನಾವಾದರೆ, ಅದರಒಳಗೆ ಸದ್ದು ಮಾಡುವ ಮುಖ್ಯ –ಸುದ್ದಿ ಇದ್ದಹಾಂಗೆ… ಸ್ನೇಹ ಅಂದ್ರೆನೆ ಹಾಗೆಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ನಾವುಹೊರಟರೆ, ನಮ್ಮೊಂದಿಗೆ ಜೋತೆಯಲ್ಲಿಬರುವ, ಬಂದು ಆಹ್ಲಾದಕರವಾಗಿ ಬೀಸುವತಂಗಾಳಿ ಇದ್ದಹಾಂಗೆ… ಸ್ನೇಹ ಅಂದ್ರೆನೆ ಹಾಗೆನಾವು ತಿನ್ನುವ ತಿಂಡಿಯಲ್ಲಿಖಾರಭಾತನೊಂದಿಗೆ ಕೆಸರಿಭಾತನ್ನು, ಇಡ್ಲಿಜೋತೆಯಲ್ಲಿ ಸಾಂಬಾರನ್ನು, ದೋಸೆ-ಯೊಂದಿಗೆ ಚಟ್ನಿಯನ್ನು ಸೇರಿಸಿ ಸವಿದಂಗೆ… ಸ್ನೇಹ ಅಂದ್ರೆನೆ ಹಾಗೆಕಣ್ಣಿಗೆ ಕಾಣುವ ಈ ದೇಹ ನಾವಾದರೆಕಂಡರು ಕಾಣದಿದ್ದರು ನಮ್ಮೊಂದಿಗೆ […]

Continue Reading

ನೆನಪುಗಳ ಉಗಿಬಂಡಿ

ನನ್ನ ಬಾಲ್ಯದ ಬೇಸಿಗೆಯ ಸೂಟಿನೆನಪು ತಂದಿತು ರೈಲಿನ ಸೀಟಿ ಅಜ್ಜಿಯಮನೆಗೆ ಹೋಗುವ ಆತುರ ರಾತ್ರಿ ಇಡೀ ರೈಲಿನ ಪ್ರಯಾಣದ ಕಾತುರ ಬಟ್ಟೆ ಬರೆ ಸೂಟಕೇಸು ವಾರದಿಂದಲೇ ತಯ್ಯಾರಿ ಚಾದರು ಬೆಡ್ಶೀಟು ಅಂತ ಹಿಂದಿನದಿನದ ತರಾತುರಿ ರೈಲಿನ ಊಟಕ್ಕೆ ನಾವು ಹಾಕುತ್ತಾ ಹೊಂಚು ಅಮ್ಮನ ಬುತ್ತಿ ಝುಣಕ ಚಪಾತಿಗೆ ಕಾದಿತು ಹಂಚು ಅಪ್ಪ ನೀರಿನ ಬಾಟಲಿ ಬಾಳಿಎಲಿ ನ್ಯೂಸ್ಪಪೆರ್ ಕಟ್ಟಿ ಕೇಳಿದರು ಅಮ್ಮನ ಅದಯೇನು ಚಟ್ನಿ ಕಟಿ ರೊಟ್ಟಿ ನಡೆದೆವು ಹಿಡಿದು ಎಲ್ಲರು ಒಂದೊಂದು ಚೀಲ ಅವಳು ಕೊಡಲು […]

Continue Reading
ಕನ್ನಡ ಕಲಿ ಶಾಲೆಗಳ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕರೆಯೋಲೆ

ಪ್ರೀತಯ ಮುದ್ದು ಮಕ್ಕಳಿ ವರ್ಷವೆಲ್ಲಾ ಕಷ್ಟಪಟ್ಟಾಯಿತು ಕನ್ನಡ ಕಲಿಯಲು ಇಷ್ಟಪಟ್ಟಾಯಿತು ಸಾಕಷ್ಟು ಸಮಯ ಅದಾಗಲೆ ಕೊಟ್ಟಾಯಿತ ಹಾಗಿದ್ದಮೇಲೆ ಕಲಿಯುವ, ಕಲಿಸುವ ಹಾಗೂ ಕಲಿಕೆಯ ಸಂಭ್ರಮವು ಆಗಬೆಕಲ್ಲವೆ..? ಇಗೋ ಆ ಸಂಭ್ರಮದ ಸಮಯವು ಬಂದಾಯಿತು ಅದರ ಕರೆಯೋಲೆ ನಿಮಗಾಗಿ ಸಿದ್ಧವಾಗಿ ನಿಮ್ಮನ್ನು ತಲುಪಿ ಕಾತುರದಿಂದ ನಿವುಗಳೆಲ್ಲರು ಬರುವುದನ್ನು ಜೋತೆಗೆ ನಿಮ್ಮ ಸ್ನೇಹಿತರನ್ನು ಕರೆತರುವುದನ್ನು ಸ್ವಾಗತಿಸಲು ನಾವು ತುದಿಗಾಲ ಮೇಲೆ ನಿಂತು ಕಾಯುವ ಸರದಿ ಬಂದಾಯಿತು. ನೀವೆಲ್ಲರೂ ಬರುತ್ತೀರಿಯಲ್ಲವೆ? ನೀವೂ ಬನ್ನಿ ನಿಮ್ಮ ಮನೆಯವರನ್ನು ಮತ್ತು ಸ್ನೇಹಿತರನ್ನು ಕರೆತನ್ನಿ. ನಿಮಗಾಗಿ […]

Continue Reading